ತಡಸ ದೇವಸ್ಥಾನದಲ್ಲಿ ವಿಶೇಷ ಪೂಜೆ.

00:00
00:00

ಶಿಗ್ಗಾಂವಿ

ಹಾವೇರಿ ಜಿಲ್ಲಾ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದೇವಿ ದೇವಸ್ಥಾನದಲ್ಲಿ ವಿಜಯ ದಶಮಿ ಅಂಗವಾಗಿ ದೇವಿ ಮಹಾಪುರಾಣ ಪ್ರವಚನ ಕಾರ್ಯಕ್ರಮ ಜರುಗಿತು. ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ವಿಶೇಷ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ಆರ್ಶೀವಚನ ನೀಡಿದ ಶ್ರೀಗಳು ಮನುಷ್ಯ ಪುರಾಣ ಕಾರ್ಯಕ್ರಮಗಳಿಗೆ ಸಂಸ್ಕಾರಯುತವಾದ ವಿಭೂತಿ, ಕುಂಕುಮ, ಗಂಧಧಾರಣ ಮಾಡಿ. ಧರ್ಮದ ಅನುಸಾರವಾಗಿ ಬರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಮವ್ವ ಲಮಾಣಿ, ಉಪಾಧ್ಯಕ್ಷ ಸಿಕಂದರ್ ಪಲ್ಲದೇ, ವಿಶ್ವನಾಥ ಕಂಬಾಳಿಮಠ, ವಾಯುಸೇನಾ ನಿವೃತ್ತ ಅಧಿಕಾರಿ ಸಿ.ಎಸ್.ಹವಾಲ್ದಾರ್, ಸೇರಿ ಅನೇಕರು ಉಪಸ್ಥಿತರಿದ್ದರು.