ಪ್ರಮೋದ ಮುತಾಲಿಕ್

ಚಿಕ್ಕಮಗಳೂರು

ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಹೋದ್ರೂ ಮುಸ್ಲೀಮರ  ಒಂದೂ  ಮತ ಸಹ ಬಿಜೆಪಿಗೆ ಬೀಳಲ್ಲ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ  ಪ್ರಮೋದ ಮುತಾಲಿಕ್ ಗುಡುಗಿದ್ದಾರೆ. ಅಲ್ಪಸಂಖ್ಯಾತರ ಮತಗಳಿಗಾಗಿ ಬಿಜೆಪಿಯವ್ರು ಸೆಕ್ಯೂಲರ್ ಆಗೋಕೆ ಹೊರಟಿದ್ದಾರೆ.ಹೀಗಾಗಿ ದೇವಸ್ಥಾನ ಕೆಡವಿದ್ರೂ, ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ವಿರೋಧಾತ್ಮಕವಾಗಿ ವರ್ತಿಸಿದ್ರು ಎಂದು ಬಿಜೆಪಿ ವಿರುದ್ಧ ಮುತಾಲಿಕ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಇತ್ತೀಚೆಗೆ ಬಿಜೆಪಿಯವರಲ್ಲಿ ಕಾಣುತ್ತಿಲ್ಲ ಹಿಂದೂಗಳು ನಿಮ್ಮನ್ನ ಗೆಲ್ಲಿಸಿದ್ದಾರೆ. ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ಈ ವೇಳೆ ಆಗ್ರಹಿಸಿದ್ರು. ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಇರೋದೇ ಮುಸ್ಲಿಮರಿಗಾಗಿ. ನಾಳೆ ಅವ್ರ ಮಕ್ಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ. ಈ ಸಂಗತಿ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಕಾಂಗ್ರೆಸ್-ಬಿಜೆಪಿ ನಾಯಕರ  ವಿರುದ್ಧ ಕಿಡಿ ಕಾರಿದರು.