ಮಂಡ್ಯದಲ್ಲಿ ಕೇಂದ್ರ ರೇಷ್ಮೆ ಮಾರಾಟ ಮಂಡಳಿಯ ಕಾರ್ಯಕಾರಿಣಿ ಸಭೆ |Mandya|

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಂಗಾಪುರ ಗ್ರಾಮದ ಲೋಕ ಪಾವನಿ ಚಾಕಿ ಕೇಂದ್ರದಲ್ಲಿ ಇಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅದ್ಯಕ್ಷರಾದ ಶ್ರೀಮತಿ ಸವಿತಾ ಅಮರಾಶೆಟ್ಟಿ ಹಾಗೂ ಸಿಲ್ಕ್ ಅಶೋಯೇಷನ್ ಆಪ್ ಇಂಡಿಯಾದ ಅಧ್ಯಕ್ಷರು ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ವಿ.ಬಾಲಸುಬ್ರಹ್ಮಣ್ಯಮ್, ಅವರನ್ನೊಳಗೊಂಡ 18 ಜನ ನಿರ್ದೇಶಕರೊಂದಿಗೆ ಕಾರ್ಯಕಾರಿ ಮಂಡಳಿಯ ಸಭೆ ನಡೆಸಲಾಯಿತು .ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿ ರೈತ ಚಿಂತಕಿ ಹಾಗೂ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಸೋಯೇಷನ್ ಕಾರ್ಯದರ್ಶಿಗಳಾದ ಶ್ರೀ ಎಂ.ರಾಮಚಂದ್ರಗೌಡರು, ವಿಜ್ಞಾನಿಗಳಾದ ಶ್ರೀ ಡಾ. ಹೆಚ್.ಕೆ.ಬಸವರಾಜ್ ಮತ್ತು ಕೃಷಿ ರೈತರಾದ ಶ್ರೀ ನವೀನ್ ಸೇರಿದಂತೆ ಹಲವು ಕೃಷಿಕರು ಉಪಸ್ಥಿತರಿದ್ದರು.