.ಭಾರತೀಯ ಸೇನೆಗೆ ಬಲ; ಡಿಆರ್‌ಡಿಒ ಹೊಸ ಡ್ರೋನ್‌

.ಭಾರತೀಯ ಸೇನೆಗೆ ಬಲ; ಡಿಆರ್‌ಡಿಒ ಹೊಸ ಡ್ರೋನ್‌

ವದೆಹಲಿ: ಹಿಮಾಲಯದಲ್ಲಿ ಮಿಲಿಟರಿ ಸರಕು ಸೇವಾ ಕಾರ್ಯಾಚರಣೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೊಸ ಡ್ರೋನ್‌(ಯುಎವಿ) ಅಭಿವೃದ್ಧಿ ಪಡಿಸಿದ್ದು, ಇದು ಸೇವಾ ಕಾರ್ಯಾಚರಣೆಯಲ್ಲಿ ಮಾತ್ರವಲ್ಲದೇ, ಶತ್ರುನೆಲೆ ಪುಡಿಗಟ್ಟುವಲ್ಲೂ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 108ನೇ ವಿಜ್ಞಾನ ಸಭೆಯಲ್ಲಿ ಈ ಡ್ರೋನ್‌ ಅನ್ನು ಪ್ರದರ್ಶಿಸಲಾಗಿತ್ತು.

5 ರಿಂದ 25 ಕೆಜಿ ವರೆಗಿನ ಪೇಲೋಡ್‌ಗಳನ್ನು ಹೊತ್ತು ಸಾಗುವ ಸಾಮರ್ಥ್ಯವಿರುವ ಡ್ರೋನ್‌, ಶತ್ರು ನೆಲೆಗಳ ಮೇಲೆ ಬಾಂಬ್‌ಗಳನ್ನು ಎಸೆಯಲು ಕೂಡ ಸಮರ್ಥವಾಗಿವೆ. 5 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಡ್ರೋನ್‌, ಸ್ವಯಂಚಾಲಿತವಾಗಿ ಸರಕು ತಲುಪಿಸಿ, ನೆಲೆಗೆ ಹಿಂದಿರುಗಬಲ್ಲದಾಗಿದೆ.