ಸಾರ್ವಜನಿಕ ಸಭೆ, ರ‍್ಯಾಲಿ ನಿಷೇಧಿಸಿದ ಆಂಧ್ರ ಸರ್ಕಾರ

ಅಮರಾವತಿ: ಸಾರ್ವಜನಿಕರ ಸುರಕ್ಷತೆಯ ದೃಷಿಯಿಂದ ರಸ್ತೆಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಸಾರ್ವಜನಿಕ ಸಭೆ, ರ್‍ಯಾಲಿಗಳನ್ನು ಆಯೋಜಿಸುವುದನ್ನು ಆಂಧ್ರ ಪ್ರದೇಶ ಸರ್ಕಾರ ನಿಷೇಧಿಸಿದೆ.
ಕಳೆದ ವಾರ ಆಂಧ್ರದ ಎರಡು ಕಡೆ ಪ್ರತಿಪಕ್ಷ ಟಿಡಿಪಿ ಆಯೋಜಿಸಿದ್ದ ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಅಸುನೀಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸಾರ್ವಜನಿಕ ರಸ್ತೆಗಳು ಮತ್ತು ಬೀದಿಗಳಲ್ಲಿ ಸಾರ್ವಜನಿಕ ಸಭೆಯನ್ನು ನಡೆಸುವ ಹಕ್ಕು 1861ರ ಪೊಲೀಸ್ ಕಾಯ್ದೆಯ ಸೆಕ್ಷನ್ 30ರ ಪ್ರಕಾರ ನಿಯಂತ್ರಣದ ವಿಷಯವಾಗಿದೆ.
ಈ ಕಾಯ್ದೆಯ ಅಡಿ ಸರ್ಕಾರ ನಿಷೇಧದ ಆದೇಶವನ್ನು ಸೋಮವಾರ ರಾತ್ರಿ ಹೊರಡಿಸಿದೆ.