ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ

ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಮತ್ತು ಭಾರತದ ಯುವ ವೇಗಿ ಉಮ್ರಾನ್ ಮಲಿಕ್ ನಡುವೆ ಯಾರು ಶ್ರೇಷ್ಠ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್‌ ವಿರಾಟ್‌ ಕೊಹ್ಲಿಯನ್ನು ಉದಾಹರಣೆಯಾಗಿ ನೀಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹ್ಯಾರಿಸ್ ರೌಫ್ ಉತ್ತಮ ಬೌಲರ್, ಅವರ ಫಿಟ್‌ನೆಸ್ ಉತ್ತಮವಾಗಿದೆ. ಅವರು ಶ್ರೇಷ್ಠ ಬೌಲರ್ ಅವರೊಂದಿಗೆ ನೀವು ಉಮ್ರಾನ್ ಮಲಿಕ್‌ರನ್ನು ಹೋಲಿಕೆ ಮಾಡಬಾರದು ಎಂದು ಹೇಳಿದರು. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸುತ್ತಾರೆ ಅವರ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಇದರಿಂದ ಅವರು ಪಂದ್ಯದ ವೇಳೆಯಲ್ಲಿ ಸ್ಥಿರವಾಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ ಎಂದು ಹೇಳಿದರು.

ಹ್ಯಾರಿಸ್ ರೀತಿ ಡಯಟ್ ಮಾಡುವವರನ್ನು ನೋಡಿಲ್ಲ

"ಕೊಹ್ಲಿ ಮತ್ತು ಇತರ ಬ್ಯಾಟರ್‌ಗಳ ನಡುವಿನ ವ್ಯತ್ಯಾಸವೆಂದರೆ ಅದು ಫಿಟ್ನೆಸ್‌. ಹ್ಯಾರಿಸ್ ಕೂಡ ತಮ್ಮ ಆಹಾರ, ತರಬೇತಿ ಮತ್ತು ಜೀವನ ವಿಧಾನದಲ್ಲಿ ಸಾಕಷ್ಟು ಶಿಸ್ತನ್ನು ಕಾಪಾಡಿಕೊಂಡಿದ್ದಾರೆ. ಹ್ಯಾರಿಸ್ ರೀತಿ ಕಟ್ಟುನಿಟ್ಟಾಗಿ ಡಯಟ್ ಮಾಡುವ ಇನ್ನೊಬ್ಬ ಪಾಕಿಸ್ತಾನದ ಬೌಲರ್ ಅನ್ನು ನಾನು ನೋಡಿಲ್ಲ. ಯಾರಿಗೂ ಅದರ ಸ್ಪಷ್ಟತೆಯಿಲ್ಲ, ಆದರೆ ರೌಫ್ ಎಲ್ಲರಂತಲ್ಲ" ಎಂದು ಜಾವೇದ್ ಹೇಳಿದರು.

ಉಮ್ರಾನ್ ಮಲಿಕ್‌ರ ಬೌಲಿಂಗ್‌ ಅನ್ನು ಗಮನಿಸಿರುವ ಆಕಿಬ್ ಜಾವೇದ್, ಭಾರತದ ವೇಗಿ ಏಕದಿನ ಮಾದರಿಯಲ್ಲಿ 10 ಓವರ್ ಗಳಲ್ಲಿ 150 ಕಿಲೋ ಮೀಟರ್ ವೇಗವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಕೆಲವು ಓವರ್ ಗಳ ನಂತರ ಉಮ್ರಾನ್‌ ಮಲಿಕ್‌ರ ಬೌಲಿಂಗ್ ವೇಗ ಕಡಿಮೆಯಾಗುತ್ತದೆ ಎಂದಿದ್ದಾರೆ

ವೇಗಿಗಳು ಪಂದ್ಯದಲ್ಲಿ ಕೊನೆಯವರೆಗೂ ತಮ್ಮ ವೇಗವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು. "ಉಮ್ರಾನ್ ಮಲಿಕ್ ಹ್ಯಾರಿಸ್ ರೌಫ್ ರೀತಿ ತರಬೇತಿ ಪಡೆದಿಲ್ಲ ಮತ್ತು ಫಿಟ್ನೆಸ್ ಕೂಡ ಕಡಿಮೆ ಇದೆ. ಏಕದಿ ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ ಮೊದಲ ಕೆಲವು ಓವರ್ ಗಳಲ್ಲಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ, ನಂತರ ಅವರ ವೇಗ 138 ಕಿಲೋ ಮೀಟರ್ ಗೆ ಕಡಿಮೆಯಾಗುತ್ತದೆ. 160 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವುದು ದೊಡ್ಡ ವಿಷಯವಲ್ಲ, ಆದರೆ, ಪಂದ್ಯದ ಕೊನೆಯವರೆಗೂ ಒಂದೇ ವೇಗವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ" ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿಯ ಜೊತೆ ಬೇರೆ ಬ್ಯಾಟರ್ ಗಳನ್ನು ಹೇಗೆ ಹೋಲಿಸಲು ಸಾಧ್ಯವಿಲ್ಲವೋ ಹಾಗೆಯೇ ಹ್ಯಾರಿಸ್ ರೌಫ್ ಜೊತೆ ಕೂಡ ಬೇರೆ ಬೌಲರ್ ಗಳನ್ನು ಹೋಲಿಕೆ ಮಾಡಲಾಗದು ಎಂದು ಅವರು ಹೇಳಿದ್ದಾರೆ.