'ಮೆಟ್ರೋ 'ಪ್ರಯಾಣಿಕರಿಗೆ ಗುಡ್‌ನ್ಯೂಸ್ : ಶೀಘ್ರವೇ ನಿಲ್ದಾಣಗಳಲ್ಲಿ 'ತಿಂಡಿ, ಟೀ-ಕಾಫಿ ' ಒದಗಿಸುವ ಕಿಯೋಸ್ಕ್ ಸ್ಥಾಪನೆ

ಬೆಂಗಳೂರು : ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಆದಷ್ಟು ಶೀಘ್ರವೇ ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳು, ತಂಪು ಪಾನೀಯಗಳ ಜೊತೆಗೆ ಟೀ, ಕಾಫಿಗಳು ಸಿಗಲಿದೆ
ಹೌದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮೆಟ್ರೋ ನಿಲ್ದಾಣಗಳಲ್ಲಿ ಆದಷ್ಟು ಶೀಘ್ರವೇ ಪ್ಯಾಕಿಂಗ್ ಮಾಡಿದ ಆಹಾರ ಪಟ್ಟಣ, ಟೀ, ಕಾಫಿ ತಿಂಡಿ ಒದಗಿಸುವ ಕಿಯೋಸ್ಕ್ ಮಳಿಗೆ ತೆರೆಯುವ ಯೋಜನೆಯಲ್ಲಿದೆ ಎಂದು 'ನಮ್ಮ ಮೆಟ್ರೋ' ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದರು.
ಈ ಯೋಜನೆಯಿಂದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಖರ್ಚಿಲ್ಲದೇ ಬರುವ ಆದಾಯ ಮೂಲವಾಗಿದೆ. ಅದಕ್ಕಾಗಿ ಕಿಯೋಸ್ಕ್ ಗಳಿಗೆ ತುಸು ಜಾಗವನ್ನು ಬಾಡಿಗೆಗೆ ನೀಡಬೇಕಾಗುತ್ತದೆ. ಈ ಕಿಯೋಸ್ಕ್ ಅಥವಾ ಇನ್ನಿತರ ಮಳಿಗೆಗಳಿಗೆ ನಿಲ್ದಾಣದ ಅತ್ಯಂತ ಕಡಿಮೆ ಸ್ಥಳಾವಕಾಶದ ಅಗತ್ಯವಿರುತ್ತದೆ. ಇದರಿಂದ ಧಾವಂತದಲ್ಲಿ ಮೆಟ್ರೋ ರೈಲು ಹತ್ತುವ ಅಥವಾ ಮೆಟ್ರೋ ನಿಲ್ದಾಣದಿಂದ ದೂರದ ಪ್ರದೇಶಗಳಿಗೆ ತೆರಳುವವ ಪ್ರಯಾಣಿಕರಿಗೆ ಸಹಾಯವಾಗಲಿದೆ.
ನಮ್ಮ ಮೆಟ್ರೋಗೆ ಕಿಯೋಸ್ಕ್ ಆದಾಯ ಮೂಲ
ಪ್ಯಾಕೆಟ್ ಮಾಡಿದ ತಿಂಡಿ, ಜ್ಯೂಸ್, ಪಾನೀಯ, ಟೀ, ಕಾಫಿ, ಚಾಕೋಲೆಟ್ ಮತ್ತು ಆಹಾರ ಪೊಟ್ಟಣಗಳು ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಗೆ ಲಭ್ಯವಾಗುತ್ತದೆ. ಅಲ್ಲದೇ ತಕ್ಕ ಟಿಕೆಟ್ ಪಡೆಯುವ ಹಲವರಿಗೆ ತಕ್ಕ ಮಟ್ಟಿನ ಚಿಲ್ಲರೆ ಸಮಸ್ಯೆ ಸಹ ನಿವಾರಣೆ ಆಗಲಿದೆ. ನಮ್ಮ ಮೆಟ್ರೋಗೂ ಇದೊಂದು ಆದಾಯ ಮೂಲವಾಗಲಿದೆ ಎಂದು ಅವರು ತಿಳಿಸಿದರು. ಇದಕ್ಕೆ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಹಾರಕ್ಕಾಗಿ ಯಾವುದೇ ರೆಸ್ಟೊರೆಂಟ್‌ಗಳಾಗಲಿ ಅಥವಾ ಕಿಯೋಸ್ಕ್‌ಗಳಾಗಲಿ ಇಲ್ಲ. ಈ ಹೊಸ ಯೋಜನೆಯಿಂದ ಅನೇಕ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸರಿಯಾದ ಸಮಯಕ್ಕೆ ತಿಂಡಿ, ಆಹಾರ ಲಭ್ಯವಾಗುತ್ತದೆ. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಲ್ಲಿ ರಿಫ್ರೆಶ್‌ಮೆಂಟ್ ಸ್ಟಾಲ್ ಹಾಕುವುದು ಉತ್ತಮ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ಆಹಾರ ಲಭ್ಯ
ಮತ್ತೊಂದು ಸ್ಥಳಕ್ಕೆ ಮೆಟ್ರೋ ಅವಲಂಬಿಸಿದ್ದೇವೆ. ಆದರೆ ಸಾಕಷ್ಟು ಭಾರಿ ನಾವು ಮೆಟ್ರೋ ನಿಲ್ದಾಣಕ್ಕೆ ತಡವಾಗಿ, ಅವಸವರವಾಗಿ ಬರುತ್ತವೆ. ಇದರಿಂದ ಊಟ, ತಿಂಡಿ, ಟೀ ಕಾಫಿಗೆ ಸೇವನೆ ಎಷ್ಟೋ ಬಾರಿ ಬಿಟ್ಟು ಬಂದಿರುತ್ತೇವೆ. ಆಗ ಮೆಟ್ರೋ ನಿಲ್ದಾಣಗಳಲ್ಲಿ ಕೆಲ ನಿಮಿಷಗಳ ಸಮಯ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ ಇಲ್ಲಿನ ಸ್ಟಾಲ್‌ಗಳಿಂದ ಅಗತ್ಯ ಆಹಾರ, ತಿಂಡಿ ಖರೀದಿಸಬಹುದು. ರಾಷ್ಟ್ರ ರಾಜಧಾನಿ ದೆಹಲಿ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಕೆಲವೇ ಸೆಕೆಂಡುಗಳಲ್ಲಿ ಚಿಲ್ಲರೆ ನೀಡಿ ಆಹಾರ ಪೊಟ್ಟಣ ಪಡೆಯಬಹುದಾದ ಸ್ಟಾಲ್‌ಗಳಿವೆ. ಇದರಿಂದ ಅಲ್ಲಿನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಯಾಣ ಸುಲಭಗೊಳಿಸಲು ಕಿಯೋಸ್ಕ ಯೋಜನೆ ಸಹಕಾರಿಯಾಗಲಿದೆ ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ನಿಲ್ದಾಣದ ಹೊರಗೆ ಆಹಾರ ಸಿಗುತ್ತದೆ
ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ಪ್ರಯಾಣಿಕರು ಕಿಯೋಸ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಅಗತ್ಯ ಇಲ್ಲ. ಕೇವಲ ಬಿಎಂಆರ್‌ಸಿಎಲ್ ಕಂಪನಿಯ ಆದಾಯ ಹೆಚ್ಚಿಸಲು ಇದು ನೆರವಾಗಬಹುದು. ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಗೆ ಬರುವಾಗ ದಾರಿಯಲ್ಲಿ ಸಿಗುವ ತಿಂಡಿ ಹೋಟೆಲ್, ರೆಸ್ಟೋರೆಂಟ್ ಇನ್ನಿತರ ಮಳಿಗೆಗಳಿಂದ ಆಹಾರ ಪೊಟ್ಟಣ ಪಡೆಯಬಹುದಾಗಿದೆ ಎಂದರು
ಆಹಾರ ಜತೆ ಪುಸ್ತಕ, ಬೇಕರಿ, ಇನ್ನಿತರ ಮಳಿಗೆ ತೆರೆಯಲು ಚಿಂತನೆ
ಇನ್ನು ಪ್ಯಾಕ್ ಮಾಡದ ಆಹಾರ ಪದಾರ್ಥಗಳು ರೈಲಿನೊಳಗೆ ಸಾಗಿಸಲು ಅನುಮತಿ ನೀಡಲಾಗುವುದಿಲ್ಲ. ಕೇವಲ ಆಹಾರ ಪೊಟ್ಟಣ ಮಾತ್ರವಲ್ಲದೇ ಭವಿಷ್ಯದಲ್ಲಿ ಬೇಕರಿ, ಟೇಕ್‌ಅವೇಗಳು, ಎಲೆಕ್ಟ್ರಾನಿಕ್ ಉಪಕರಣ, ಪುಸ್ತಕಗಳು, ಜನರಲ್ ಸ್ಟೋರ್ಸ್, ಸೌಂದರ್ಯವರ್ಧಕ ಮಳಿಗೆಗಳು ನಿಲ್ದಾಣಕ್ಕೆ ಅವಕಾಶ ಮಾಡಿಕೊಡುವತ್ತ ಬಿಎಂಆರ್‌ಸಿಎಲ್ ಚಿಂತಿಸುತ್ತಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೆಲವು ದಿನಗಳ ಹಿಂದಷ್ಟೇ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ತೆರೆದಿದೆ. ಮುಂಬರುವ ವರ್ಷಗಳಲ್ಲಿ ನಿಲ್ದಾಣದಲ್ಲಿ ಮತ್ತೊಂದು
ಮಳಿಗೆಯನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.