exportಗಣೇಶೋತ್ಸವ: ನಾವು ಯಾವ ನಿಯಮ ಕೂಡ ಪಾಲನೆ ಮಾಡಲ್ಲ | Banglore |

ಗಣೇಶ ಹಬ್ಬದ ಅವೈಜ್ಞಾನಿಕ ಮಾರ್ಗಸೂಚಿಗೆ ಬೇಸರ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು. ಬಿಬಿಎಂಪಿ ಕಚೇರಿಗೆ ಗಣಪತಿ ಹೊತ್ತುಕೊಂಡು ಬಂದ ಕಾರ್ಯಕರ್ತರು ಗಣೇಶೋತ್ವವ ವಿರುದ್ಧ ಜಾರಿಗೆ ತಂದಿರುವ ನಿಯಮಗಳನ್ನು ಖಂಡಿಸಿದರು. ಈ ವೇಳೆ ಮಾತನಾಡಿದ ಗಣೇಶ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜ್ ನಮಗೆ ಇಷ್ಟು ದಿನ ಆಚರಣೆ ಮಾಡಿ ಅಂತಾ ಹೇಳಲಿಕ್ಕೆ ಇವ್ರು ಯಾರು? ನಾಳೆದಿಂದ ಗಣೇಶ್ ಚರ್ತುದರ್ಶಿ ವರೆಗೆ ಕೂಡ ಆಚರಣೆ ಮಾಡುತ್ತೇವೆ. ನಾವು ಯಾವ ನಿಯಮ ಕೂಡ ಪಾಲನೆ ಮಾಡಲ್ಲ. ಧಾರ್ಮಿಕ ವಿಚಾರಗಳಿಗೆ ಯಾಕೆ ತಲೆ ಹಾಕುತ್ತೀರಾ ಎಂದು ಪ್ರಶ್ನಿಸಿ ಸರ್ಕಾರ ನಿಯಮವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಹಲವಾರು ಸಭೆಗಳು ನಡೆದಿವೆ. ಸಭೆಯಲ್ಲಿ ತೀರ್ಮಾನ ಮಾಡಿದಂತೆ ಅದನ್ನ ಪಾಲಿಸುತ್ತಿದ್ದೇವೆ. ಆದಾಗ್ಯೂ ಕೆಲ ಬೇಡಿಕೆಗಳನ್ನ ಉತ್ಸವ ಸಮಿತಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಆಚರಣೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದರು.