ಮತ್ತೆ ವೀರಶೈವ ಪ್ರತ್ಯೇಕ ಧರ್ಮದ ದನಿ ಎತ್ತಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಮತ್ತೊಮ್ಮೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ. ತಾವು ಈ ಹಿಂದೆ ವೀರಶೈವ-ಲಿಂಗಾಯಿತ ಒಂದೇ ಎಂದು ಹೇಳಿದ್ದೆ. ಆದರೆ, ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಲಿಂಗಾಯಿತ ಸಮುದಾಯದ 99 ಉಪಪಂಗಡಗಳನ್ನು ಸೇರಿಸಿ ವೀರಶೈವ ಧರ್ಮವನ್ನಾಗಿ ಮಾಡಲು ಸಮುದಾಯದ ಎಲ್ಲರೂ ಚರ್ಚೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ಸದಾಶಿವನಗರದ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿದ ಅವರು ನಾನು ಪ್ರತ್ಯೇಕ ಧರ್ಮದ ಕೂಗು ಎತ್ತಲೇ ಇಲ್ಲ. ಹೊಸ ಸಮಾಜಕ್ಕೆ ಒಳ್ಳೆಯಾಗಲಿ ಎಂದು ಚುನಾವಣೆಗೆ ಮುನ್ನ ಹೇಳಿದ್ದೆ. ಕೆಲ ಸಮುದಾಯಗಳು ಕೂಡಿದರೆ ಯಾರಿಗೆ ಸಮಸ್ಯೆ ಇದೆ. ಎರಡು ವರ್ಷಗಳ ವಿದಾನಸಭಾ ಚುನಾವಣೆ ನಂತರ ನಾವೆಲ್ಲ ಕೂಡಿ ಬಹಳ ಮುಕ್ತ ಮನಸ್ಸಿನಿಂದ ಸಮಯ ನಿಗದಿ ಮಾಡದೇ, ಪಂಚಪೀಠದವರು, ವಿರಕ್ತ ಮಠದ ಗುರುಗಳು ಸೇರಿದಂತೆ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಮುಂದುವರೆಯಲು ಬಯಸಿರುವುದಾಗಿ ತಿಳಿಸಿದರು. ಈ ಹಿಂದೆ ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಒಂದು ವೇಳೆ, ವೀರಶೈವ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದರೆ, ಎಲ್ಲರಿಗೂ ಒಳ್ಳೆಯದಾಗುತ್ತಿತ್ತು. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಎಲ್ಲ ವೀರಶೈವ ಪ್ರತ್ಯೇಕ ಧರ್ಮಕ್ಕಾಗಿ ಚರ್ಚೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಸಾಮೂಹಿಕವಾಗಿ ಮುನ್ನುಗೋಣ ಎಂದು ತಾವು ಹೇಳಿರುವುದಾಗಿ ತಿಳಿಸಿದ್ದಾರೆ…