ಬೀದರನ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಗೆ ಮೋಕ್ಷ ಯಾವಾಗ... ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ದೇವರು ವರ ಕೊಟ್ಟರೆ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೆ ಹಾಯಿತು ನಮ್ಮ ಬೀದರನ ರಾಷ್ಟ್ರೀಯ ಹೆದ್ದಾರಿ ಕಥೆ.. ಬನ್ನಿ ಅದೇನ್ ಅಂತ ನೋಡೋಣ. ಈ ನಮ್ನ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿ 16 A ಎಂದು ಮೇಲದರ್ಜೆಗೆರಿಸಿ 2017 ರಲ್ಲಿ ಘೋಷಿಸಲಾಗಿತ್ತು. ಆದರೆ ಜನಪ್ರತಿನಿದಿಗಳ ಹಾಗೂ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪ್ರಾರಂಭವಾಗಲೇ ಇಲ್ಲ. ಇದಕ್ಕೆ ಸಾಕಷ್ಟು ಹೋರಾಟಗಳು ಸಹ ನಡೆದವು.ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ನಿತೀನ್ ಘಡಕರಿ 2020 ಡಿಸೆಂಬರ್ 19 ರಂದು ದೆಹಲಿಯಿಂದ ಆನ್ ಲಾಯಿನ್ ಮೂಲಕ ಶಂಕು ಸ್ಥಾಪನೆ ಮಾಡಿದರು. ಬೀದರ, ಔರಾದ್ ಮತ್ತು ಮಹಾರಾಷ್ಟದ ನಾoದೆಡ ಗೆ ಸಂಪರ್ಕಿಸುವ ಮುಖ್ಯ್ ಹೆದ್ದಾರಿ ಕೂಡ ಆಗಿದೆ. ಆದರೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ 7 ತಿಂಗಳು ಕಳೆದರೂ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಈ ಕಡೆ dont care ಅಂತಾಯಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಆದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಈ ಭಾಗದ ಕೈಗರಿಕೊದ್ಯಾಮಿಗಳು, ಸಾರ್ವಜನಿಕರು ರಸ್ತೆ ಕಾಮಗಾರಿ ಯಾವಾಗ ಪ್ರಾರಂಭವಾಗುತ್ತೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ