ಕಲ್ಯಾಣ ಕರ್ನಾಟಕದ ಪುಟಾಣಿ ಗೂಗಲ್

ಇಂದಿನ ಆಧುನಿಕ ಯುಗದಲ್ಲಿ ಮಾನವ ಎಲ್ಲವನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಆದರೆ ಇಲ್ಲೊಬ್ಬ ಪುಟಾಣಿ ಗೂಗಲ್ ಏನು ಕೇಳಿದರೂ ಪಟ ಪಟನೆ ಎಳ್ಳು ಹುರಿದಂತೆ ಎಲ್ಲವನ್ನೂ ಹೇಳುತ್ತಾನೆ. ಈತನ ಹೆಸರು ಸಾಥ್ವಿಕ ಶಿವಕುಮಾರ ದ್ಯಾಮನಕರ್. ಮೂಲತಹ ಗುಲ್ಬರ್ಗಾ ದವನು. ಕೇವಲ 3 ವರ್ಷ ವಯಸ್ಸಿನ ಸಾತ್ವಿಕ ಬಹುಮುಖಪ್ರತಿಭೆಯಾಗಿದ್ದಾನೆ. ಕನ್ನಡ, ಹಿಂದಿ ಚಿತ್ರಗಳ ಗೀತೆಗಳು, ಭಾವಗೀತೆಗಳನ್ನು ಸರಾಗವಾಗಿ ಹಾಡುತ್ತಾನೆ. ಅಷ್ಟೇ ಅಲ್ಲ ಗಾದೆ ಮಾತುಗಳು, ದೇಶದಲ್ಲಿರುವ ಎಲ್ಲಾ ರಾಜ್ಯಗಳ ರಾಜಧಾನಿಗಳ ಹೆಸರು, ರಾಷ್ಟ್ರಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟೀಯ ಕ್ರೀಡೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬಲ್ಲವನಾಗಿದ್ದಾನೆ. ಈ ಬಾಲಕನ ಬುದ್ಧಿಶಕ್ತಿಯ ರಹಸ್ಯ ಏನು ಎಂದು ಅವರ ತಾಯಿಗೆ ಕೇಳಿದಾಗ ಅವರು ಏನ್ಹೇ ಹೇಳ್ತಾರೆ ಕೇಳಿ ಈ ಪುಟಾಣಿ ಬಾಲಕನ ವಿಡಿಯೋ ಗಳನ್ನು ಮಾಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಕಳುಹಿಸಲಾಗಿದೆ. ನಿಜವಾಗಲೂ ಅದೆಷ್ಟೋ ಪುಟಾಣಿಗಳಿಗೆ ಈ ಗೂಗಲ್ ಪುಟಾಣಿ ರೋಲ್ ಮಾಡಲ್ 9ಲೈವ್ ಗುಲ್ಬರ್ಗ