ಹಿರಿಯ ಪತ್ರಕರ್ತ ವಿಲಾಸ ವಸಂತರಾವ್ ನಾಂದೋಡಕರಗೆ ಡಾಕ್ಟರೇಟ್

ಧಾರವಾಡ

ಹಿರಿಯ ಪತ್ರಕರ್ತ ವಿಲಾಸ ವಸಂತರಾವ್ ನಾಂದೋಡಕರ ಅವರು ಸಾದರಪಡಿಸಿದ "ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಪತ್ರಕರ್ತರು ಒಂದು ಅಧ್ಯಯನ" ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಹಿರಿಯ ಪತ್ರಕರ್ತ ವಿಲಾಸ್ ನಾಂದೋಡಕರ ಅವರಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜಯಕುಮಾರ ಮಾಲಗತ್ತಿ ಅವರು ಮಾರ್ಗದರ್ಶನ ನೀಡಿದ್ದಾರೆ. ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ನೈಜ ಸ್ಥಿತಿಗತಿ, ವೃತ್ತಿಪರತೆ, ಸಾಮಾಜಿಕ ಸ್ಥಿರತೆ, ಶೈಕ್ಷಣಿಕ ಹಿನ್ನೆಲೆ, ತಾಂತ್ರಿಕ ಕೌಶಲ್ಯತೆ ಸೇರಿದಂತೆ ಹಲವಾರು ಪ್ರಮುಖ ಅಂಶಗಳ ಮೇಲೆ ವಿಲಾಸ ನಾಂದೋಡಕರ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.