ಪತ್ನಿಯನ್ನ ಕೊಂದು ಮನೆ ಅಂಗಳದಲ್ಲೇ ಹೂತಿಟ್ಟ ಪತಿ; 18 ತಿಂಗಳ ನಂತ್ರ ಕೃತ್ಯ ಬಯಲು

ಪತ್ನಿಯನ್ನ ಕೊಂದು ಮನೆ ಅಂಗಳದಲ್ಲೇ ಹೂತಿಟ್ಟ ಪತಿ; 18 ತಿಂಗಳ ನಂತ್ರ ಕೃತ್ಯ ಬಯಲು

ಕೇರಳ: ಕೇರಳದ ಎರ್ನಾಕುಲಂನಲ್ಲಿ ಸುಮಾರು ಒಂದೂವರೆ ವರ್ಷದ ಹಿಂದೆ ಪತ್ನಿಯನ್ನು ಕೊಂದು ಮನೆಯ ಅಂಗಳದಲ್ಲೇ ಹೂತು ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಜೀವ್ ತನ್ನ ಪತ್ನಿಯನ್ನು ಸುಮಾರು 18 ತಿಂಗಳ ಹಿಂದೆ ಕೊಂದಿದ್ದಾನೆ.

ಕೊಲೆಯ ಸಾಕ್ಷ್ಯ ನಾಶಪಡಿಸಲು ಪತ್ನಿಯ ಮೃತದೇಹವನ್ನು ಮನೆಯ ಅಂಗಳದಲ್ಲೇ ಹೂತಿಟ್ಟಿದ್ದ. ಇದೀಗ ಈ ಕೃತ್ಯ ಬಯಲಾಗಿದ್ದು, ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ.

ಸಜೀವ್ ಅವರ ಪತ್ನಿ ರಮ್ಯಾ ಅವರು ಆಗಸ್ಟ್ 2021 ರಲ್ಲಿ ನಾಪತ್ತೆಯಾಗಿದ್ದರು. ಸಜೀವ್ ಫೆಬ್ರವರಿ 2022 ರಲ್ಲಿ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದರು. ವಿಶೇಷ ಪೊಲೀಸ್ ತಂಡವು ನಡೆಸಿದ ವೈಜ್ಞಾನಿಕ ತನಿಖೆಯ ನಂತರ ಸಜೀವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದೂರು ನೀಡಿದ್ದ ಪತಿಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ, ಆರೋಪಿಯನ್ನು ಸೂಕ್ಷ್ಮವಾಗಿ ಗಮನಿಸಿತ್ತು. ಒಂದು ವರ್ಷದಿಂದ ಆತನ ಮೇಲೆ ನಿಗಾ ಇರಿಸಲಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಲು ತಂಡವು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ ನಂತರ ಬಂಧಿಸಲಾಯಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿ ರಮ್ಯಾಳ ಜೊತೆ ಆಕೆಯ ಪತಿ ಸಜೀವ್ ಜೊತೆ ಫೋನ್‌ನಲ್ಲಿ ಜಗಳವಾಡಿದ ನಂತರ ಮನೆಗೆ ಬಂದು ಬರ್ಬರವಾಗಿ ಕೊಲೆ ಮಾಡಿದ್ದ. ನಂತ್ರ, ಸಾಕ್ಷ್ಯ ನಾಶಪಡಿಸಲು ಆಕೆಯ ಶವವನ್ನು ಮನೆಯ ಬಳಿಯೇ ಹೂತಿಟ್ಟು ಒಂದೂವರೆ ವರ್ಷ ಅದೇ ಮನೆಯಲ್ಲೇ ವಾಸವಿದ್ದ. ಆರೋಪಿ ತನ್ನ ಪತ್ನಿ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ಸಂಬಂಧಿಕರು ಹಾಗೂ ಸ್ಥಳೀಯರಿಗೆ ತಿಳಿಸಿ ಮುಂದಿನ ಮದುವೆಗೆ ಸಿದ್ಧತೆ ನಡೆಸಿದ್ದ.

ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ, ಮಹಿಳೆಯ ಶವದ ಅವಶೇಷಗಳು ಮನೆಯ ಕುಳಿತುಕೊಳ್ಳುವ ಪ್ರದೇಶದ ಬಳಿ ಕಂಡುಬಂದಿವೆ. ಇದು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಸಜೀವ್ ಅವರನ್ನು ಕೊಲೆ ಆರೋಪದಡಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿಯಲ್ಲಿ ಬಂಧಿಸಲಾಯಿತು. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.