ಹುಬ್ಬಳ್ಳಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಬಂದಿದ್ದ ಜಮ್ಮು ಕಾಶ್ಮೀರ ಪ್ರತಿನಿಧಿಗಳ ಆರೋಗ್ಯದಲ್ಲಿ ಏರುಪೇರು
ಹುಬ್ಬಳ್ಳಿ: ನಗರದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಿನ್ನೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ ಪ್ರತಿನಿಧಿಗಳ ಆರೋಗ್ಯದಲ್ಲಿ ಏರುಪೇರಾಗಿರೋದು ಕಂಡುಬಂದಿದೆ. ನಾನಾ ರಾಜ್ಯದ ಪ್ರತಿನಿಧಿಗಳು ಜ. 9ರಿಂದ ಧಾರವಾಡಕ್ಕೆ ಬಂದಿದ್ದರು. ಆ ಪೈಕಿ ಒಟ್ಟು 15 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನ ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾಯಿಡ್ ಎಂಬ ಪ್ರತಿನಿಧಿಗೆ ಎದೆ ನೋವು ಕಾಣಿಸಿಕೊಂಡರೆ, ಆಸ್ಮಾ ಮಹಿಳಾ ಪ್ರತಿನಿಧಿಗೆ ಬಲಗೈ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಚಿಕಿತ್ಸೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಯುವಜನೋತ್ಸವ ಪ್ರಯುಕ್ತ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗೆ ರಾಜ್ಯಪಾಲ ಥಾವರ್‌ಚಂದ್ ಗೇಹ್ಲೋತ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಜಾನಪದ ನೃತ್ಯ ಸ್ಪರ್ಧೆ ಕೆಸಿಡಿ ಆವರಣ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದೆ.