ಮಂಗಳೂರು: ಸುಧಾರಣಾ ಕಾಮಗಾರಿ ಹಿನ್ನೆಲೆ, ನ. 8ರಿಂದ ಡಿ. 12 ರವರೆಗೆ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಮಂಗಳೂರು: ಮುಂಬಯಿಯ ಲೋಕಮಾನ್ಯ ತಿಲಕ್ ಟರ್ಮಿನಸ್ ನಲ್ಲಿ ಪಿಟ್ ಲೈನ್ no 6ರಲ್ಲಿನ ಸುಧಾರಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 8ರಿಂದ ಡಿಸೆಂಬರ್ ಹನ್ನೆರಡರವರೆಗೆ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ತಿರುವನಂತಪುರಂ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನವೆಂಬರ್ 9ರಿಂದ ಹನ್ನೊಂದು ರವರೆಗೆ ಪನ್ವೇಲ್ ವರೆಗೆ ಮಾತ್ರ ಸಂಚರಿಸಲಿದೆ.
ಮಂಗಳೂರು ಸೆಂಟ್ರಲ್ ಮುಂಬೈ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ನವೆಂಬರ್ 9ರಿಂದ ಡಿಸೆಂಬರ್ ರವರೆಗೆ ಪನ್ ವೆಲ್ ಜಂಕ್ಷನ್ ವರೆಗೆ ಸಂಚರಿಸಲಿದೆ. ಮುಂಬೈ ಲೋಕಮಾನ್ಯ ತಿಲಕ್ ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್ ಪ್ರೆಸ್ ನವೆಂಬರ್ 9ರಿಂದ ಡಿಸೆಂಬರ್ ರವರೆಗೆ ಲೋಕಮಾನ್ಯ ತಿಲಕ್ ಬದಲಿಗೆ ಪನ್ವೇಲ್ ನಿಲ್ದಾಣದಿಂದ ಹೊರಡಲಿದೆ.
ಲೋಕಮಾನ್ಯ ತಿಲಕ್ ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನವೆಂಬರ್ 10ರಿಂದ ಡಿಸೆಂಬರ್ 13ರವರೆಗೆ ಲೋಕಮಾನ್ಯ ತಿಲಕ್ ಬದಲಿಗೆ ಪನ್ವೇಲ್ ನಿಂದ ಹೊರಡಲಿರುವುದಾಗಿ ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.