ಪತಂಜಲಿ ಸೇರಿ 16 ಭಾರತೀಯ ಕಂಪನಿಗಳ ಔಷಧ ರಫ್ತಿಗೆ ನೇಪಾಳ ನಿಷೇಧ

ಕಠ್ಮಂಡು: ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳ ಔಷಧಗಳ ಆಮದನ್ನು ನೇಪಾಳ ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ(WHO) ಉತ್ಪಾದನಾ ಗುಣಮಟ್ಟವನ್ನು ಅನುಸರಿಸಲು ವಿಫಲವಾದ ಭಾರತದ 16 ಔಷಧೀಯ ಕಂಪನಿಗಳಿಂದ ಔಷಧ ಆಮದು ಮಾಡಿಕೊಳ್ಳುವುದಕ್ಕೆ ನೇಪಾಳ ನಿಷೇಧ ಹೇರಿದೆ. WHO ಸೂಚಿಸಿದ ಉತ್ಪಾದನಾ ಗುಣಮಟ್ಟವನ್ನು ಅನುಸರಿಸದ ಕಂಪೆನಿಗಳಿಂದ ನಾವು ಔಷಧ ಖರೀದಿಸುವುದಿಲ್ಲ ಎಂದು ಇಲಾಖೆಯ ವಕ್ತಾರ ಸಂತೋಷ್ ಕೆ.ಸಿ. ತಿಳಿಸಿದ್ದಾರೆ