ಯತ್ನಾಳ್ ಸಿಡಿ ರಹಸ್ಯ, ನಿರಾಣಿ ಹೇಳುತ್ತಿರುವ ಕೊಲೆ ರಹಸ್ಯ ಏನೆಂದು ಬಿಜೆಪಿ ಬಹಿರಂಗಪಡಿಸಬೇಕು : ರಾಜ್ಯ ಕಾಂಗ್ರೆಸ್ ಒತ್ತಾಯ

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಿರುವ ಸಿಡಿ ರಹತ್ಯ, ಮುರುಗೇಶ್ ನಿರಾಣಿ ಹೇಳುತ್ತಿರುವ ಕೊಲೆ ರಹಸ್ಯ ಏನೆಂದು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಘಟಕ ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,ಯತ್ನಾಳರ ಚಾಲಕನ ಕೊಲೆ ವಿಚಾರ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ? ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಏನದು ಕೊಲೆ ರಹಸ್ಯ? ತನಿಖೆ ಮಾಡಿಲ್ಲವೇಕೆ? ಯತ್ನಾಳರನ್ನು ಕಂಡರೆ ತಮಗೆ ಏಕಿಷ್ಟು ಭಯ? ಯತ್ನಾಳ್ ಹೇಳುತ್ತಿರುವ ಸಿಡಿ ರಹಸ್ಯ, ನಿರಾಣಿ ಹೇಳುತ್ತಿರುವ ಕೊಲೆ ರಹಸ್ಯ ಏನೆಂದು ಬಿಜೆಪಿ ಬಹಿರಂಗಪಡಿಸಬೇಕು ಎಂದು ಹೇಳಿದೆ.