ಏ. 27 ರಂದು ಬದರಿನಾಥ ದೇವಾಲಯ ತೆರೆಯಲಾಗುವುದು : ದೇಗುಲ ಸಮಿತಿ ಮಾಹಿತಿ

ನವದೆಹಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯದ ಪವಿತ್ರ ಗೇಟ್‌ವೇಗಳು ಏ. 27 ರಂದು ಬೆಳಿಗ್ಗೆ 7:10 ಕ್ಕೆ ತೆರೆಯಲಾಗುವುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಂಚಂಗ್ ಗಧ್ನಾ ಎಂದೂ ಕರೆಯಲ್ಪಡುವ ಕ್ಯಾಲೆಂಡರ್ ಅನ್ನು ವಿಶ್ಲೇಷಿಸಿದ ಬಳಿಕ ಬದರಿನಾಥ ದೇವಾಲಯದ ದ್ವಾರ ತೆರೆಯುವ ದಿನಾಂಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯು ಹೇಳಿದೆ.
ಏಪ್ರಿಲ್ 12 ರಂದು ಗಾಡು ಘಡ ಕಲಶ ಯಾತ್ರೆ ಪ್ರಾರಂಭವಾಗಲಿದೆ. ಪ್ರತಿ ವರ್ಷ ಹಿಮಾಲಯದ ದೇವಾಲಯಕ್ಕೆ ತೆರೆಯುವ ಮೊದಲು ಎಳ್ಳು ಎಣ್ಣೆಯನ್ನು ಹೊಂದಿರುವ ಹೂಜಿಯನ್ನು ತರಲಾಗುತ್ತದೆ.
ನ. 19 ರಂದು ತೀವ್ರಗೊಂಡ ಚಳಿಗಾಲದ ಹಿನ್ನೆಲೆಯಲ್ಲಿ ಬದರಿನಾಥದ ದ್ವಾರಗಳನ್ನು ಮುಚ್ಚಲಾಗಿತ್ತು. ಚಳಿಗಾಲದಲ್ಲಿ ದೇಗುಲಗಳು ದಟ್ಟವಾದ ಹಿಮದಿಂದ ಮುಚ್ಚಲ್ಪಡುತ್ತವೆ. ಹಾಗಾಗಿ ಬಂದ್ ಮಾಡಲಾಗಿತ್ತು.
ಈ ದೇವಾಲಯವು ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥದೊಂದಿಗೆ ಚಾರ್ ಧಾಮ್ ಎಂದು ಕರೆಯಲ್ಪಡುವ ನಾಲ್ಕು ಐತಿಹಾಸಿಕ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಉತ್ತರಾಖಂಡದ ಬದರಿನಾಥ ಪಟ್ಟಣದಲ್ಲಿದೆ. ಪ್ರತಿವರ್ಷ ಆರು ತಿಂಗಳ ಕಾಲ ತೆರೆದಿರುತ್ತದೆ.