ರಾಜ್ಯದಲ್ಲೂ ಜಾರಿಗೆ ಬರಲಿದೆ ಗುಜರಿ ನೀತಿ

ರಾಜ್ಯದಲ್ಲೂ ಜಾರಿಗೆ ಬರಲಿದೆ ಗುಜರಿ ನೀತಿ

ಬೆಂಗಳೂರು: ಅವಧಿ ಮೀರಿದ ನೋಂದಾಯಿತ ವಾಹನಗಳ ನಾಶಪಡಿಸುವ ನೀತಿ (ಗುಜರಿ ನೀತಿ)ಗೆ ಸಚಿವ ಸಂಪುಟ ಗುರುವಾರ (ಡಿ.22) ಅನುಮೋದನೆ ನೀಡಿದೆ. 2021 ಎಪ್ರಿಲ್‌ನಲ್ಲೇ ಕೇಂದ್ರ ಸರ್ಕಾರವು ವಾಹನಗಳ ಗುಜರಿ ನೀತಿ ಘೋಷಿಸಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನೀತಿ ರೂಪಿಸಿದ್ದು, ಸಾರಿಗೆ ಇಲಾಖೆಯು ನೀತಿ ಅನುಷ್ಠಾನಕ್ಕೆ ಸಿದ್ದತೆ ನಡೆಸಿದೆ. ಸ್ವಯಂಪ್ರೇರಿತವಾಗಿ ವಾಹನ ಮಾಲಕರು ಗುಜರಿ ಕೇಂದ್ರಕ್ಕೆ ಒಪ್ಪಿಸಿದರೆ ಮಾತ್ರ ನಾಶಪಡಿಸಲಾಗುವುದು. ಒತ್ತಾಯ ಪೂರ್ವಕವಾಗಿ ಗುಜರಿಗೆ ಹಾಕುವುದಿಲ್ಲ ಎನ್ನಲಾಗಿದೆ