ಭಾನುವಾರ 'T-20' ವಿಶ್ವಕಪ್ ಫೈನಲ್ : ರಜಾ ದಿನ ಎಂದು ಕುಡಿದು ಮಜಾ ಮಾಡಿದ್ರೆ ಹುಷಾರ್ : 'ಮದ್ಯ' ಪ್ರಿಯರಿಗೆ ಎಚ್ಚರಿಕೆ ಕೊಟ್ಟ ಪೊಲೀಸ್ರು

ಭಾನುವಾರ 'T-20' ವಿಶ್ವಕಪ್ ಫೈನಲ್ : ರಜಾ ದಿನ ಎಂದು ಕುಡಿದು ಮಜಾ ಮಾಡಿದ್ರೆ ಹುಷಾರ್ : 'ಮದ್ಯ' ಪ್ರಿಯರಿಗೆ ಎಚ್ಚರಿಕೆ ಕೊಟ್ಟ ಪೊಲೀಸ್ರು

ಬೆಂಗಳೂರು : ನವೆಂಬರ್ 13 ಭಾನುವಾರದಂದು ಟಿ 20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿದೆ.

ಗ್ರೂಪ್ ಎರಡರದಲ್ಲಿ ಟೇಬಲ್ ಟಾಪರ್ ಆಗಿರುವ ರೋಹಿತ್ ಪಡೆ ಟಿ 20 ವಿಶ್ವಕಪ್ ನಿಯಮಗಳ ಪ್ರಕಾರ ಗ್ರೂಪ್ 1 ರಲ್ಲಿ ಎರಡನೇ ಸ್ಥಾನ ಗಳಿಸಿರುವ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಆಂಗ್ಲರನ್ನು ಮಣಿಸಿ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆ ಇಡಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹಾಗಾಗಿ ನ13 ರ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ಗಾಗಿ ವಿಶ್ವದೆಲ್ಲೆಡೆ ಅಭಿಮಾನಿಗಳು ಕಾಯುತ್ತ ಕುಳಿತಿದ್ದಾರೆ. ರಜಾ ದಿನದಂದು ವಿಶ್ವಕಪ್ ಫೈನಲ್ ನೋಡುತ್ತ ಮೋಜು ಮಸ್ತಿ ಮಾಡಬೇಕೆಂದುಕೊಂಡಿದ್ದ ಬೆಂಗಳೂರಿಗರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೆಂಗಳೂರು ನಗರದ ಪೊಲೀಸರು (Bengaluru City Police) ಸೋಶಿಯಲ್ ಮೀಡಿಯಾದಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಅಂದು ಭಾನುವಾರವಾದ ಹಿನ್ನೆಲೆ ಬೆಂಗಳೂರಿನ ಬಹುತೇಕ ಕೆಫೆಗಳು, ಬಾರ್ಗಳು ಮತ್ತು ಪಬ್ಗಳು ಪಂದ್ಯದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲು ಸಜ್ಜಾಗಿದೆ. ಆದ್ದರಿಂದ ಪಂದ್ಯ ನೋಡುತ್ತಾ ಹೆಚ್ಚು ಕುಡಿದು ಮನೆಗೆ ತೆರಳಲು ರಸ್ತೆಗಿಳಿಯುವ ವಾಹನ ಸವಾರರಿಗೆ ಪೊಲೀಸರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಮನವಿ ಮಾಡಿದ್ದಾರೆ.ಒಂದು ವೇಳೆ ಕುಡಿದು ವಾಹನ ಚಲಾಯಿಸಿದ್ರೆ ದಂಡ ಬೀಳುವುದಂತೂ ಗ್ಯಾರೆಂಟಿ.

ನವೆಂಬರ್ 13 ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅಂತಿಮ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ನವೆಂಬರ್ 9 ಮತ್ತು 10ರಂದು ಸಿಡ್ನಿಯಲ್ಲಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ.