ವ್ಯಕ್ತಿಯೋರ್ವನು ನೇಣಿಹಾಕಿಕೊಂಡು ಆತ್ಮಹತ್ಯೆ

00:00
00:00

ವ್ಯಕ್ತಿಯೋರ್ವ ಗಿಡದ ಸಂದಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ಕವಲಗೇರಿ ಕ್ರಾಸ್ ಬಳಿಯಲ್ಲಿ ನಡೆದಿದೆ. ಧಾರವಾಡ ಉಪನಗರ ಪೋಲಿಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ ಸುಮಾರು 50 ವಯಸ್ಸಿನ ಈ ಒಂದು ವ್ಯಕ್ತಿ ರಸ್ತೆಯ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸುದ್ದಿ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಕುರಿತು ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.ಇನ್ನೂ ಈ ಒಂದು ವ್ಯಕ್ತಿಯ ಕುರಿತು ನಿಮಗೆ ಮಾಹಿತಿ ಅಥವಾ ಪರಿಚಯ ಇದ್ದರೆ ಕೂಡಲೇ ಉಪನಗರ ಪೊಲೀಸರಿಗೆ ಮಾಹಿತಿ ನೀಡಿ.