KSRTC ಚಾಲನಾ ಸಿಬ್ಬಂದಿ'ಗೆ ಗುಡ್ ನ್ಯೂಸ್: 'ಸಾಂದರ್ಭಿಕ ಒಪ್ಪಂದ'ದ ಮೇಲೆ ಕರ್ತವ್ಯ ನಿರ್ವಹಿಸುವವರಿಗೆ ಪ್ರೋತ್ಸಾಹಧನ ಘೋಷಣೆ

KSRTC ಚಾಲನಾ ಸಿಬ್ಬಂದಿ'ಗೆ ಗುಡ್ ನ್ಯೂಸ್: 'ಸಾಂದರ್ಭಿಕ ಒಪ್ಪಂದ'ದ ಮೇಲೆ ಕರ್ತವ್ಯ ನಿರ್ವಹಿಸುವವರಿಗೆ ಪ್ರೋತ್ಸಾಹಧನ ಘೋಷಣೆ

ಬೆಂಗಳೂರು: ಸಾಂದರ್ಭಿಕ ಒಪ್ಪಂದದ ಮೇಲೆ ಕರ್ತವ್ಯ ನಿರ್ವಹಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಪ್ರೋತ್ಸಾಹಧನವನ್ನು ನೀಡುವುದಾಗಿ ಕೆಎಸ್ ಆರ್ ಟಿಸಿ ಘೋಷಿಸಿದೆ. ಈ ಮೂಲಕ ಚಾಲನಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸಾರಿಗೆ ಬಸ್ ಗಳನ್ನು ಸಾಂಧರ್ಬಿಕ ಒಪ್ಪಂದದ ಮೇಲೆ ಒದಗಿಸಲಾಗುತ್ತಿದೆ.

ಹೀಗೆ ತೆರಳುವಂತ ಚಾಲನಾ ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ದಿನಾಂಕ 24-12-2022ರಂದು ನಡೆದ ಸಿಸಿಜಿ ಸಭೆಯಲ್ಲಿ ಚರ್ಚಿಸಿಂದೆತ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ದಿನಾಂಕ 01-01-2023ರಿಂದ ಜಾರಿಗೆ ಬರುವಂತೆ ಸಾಂದರ್ಭಿಕ ಒಪ್ಪಂದದ ಮೇಲೆ ತೆರಳುವ ಚಾಲನಾ ಸಿಬ್ಬಂದಿಗಳಿಗೆ ಎಲ್ಲಾ ವರ್ಗದ ಬಸ್ಸುಗಳಿಗೆ ದಿನ ಒಂದಕ್ಕೆ ರೂ.100 ಪ್ರೋತ್ಸಾಹ ಧನ ಭತ್ಯೆ ನೀಡಿ ಆದೇಶಿಸಿದೆ.