ರಾಯರ ದರ್ಶನ ಪಡೆದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಈಶ್ವರಪ್ಪ ಮೊದಲಿಗೆ ಗ್ರಾಮದೇವತೆ ಮಂಚಾಲಮ್ಮ ದೇವಿ ದರ್ಶನವನ್ನು ಪಡೆದರು, ಬಳಿಕ ರಾಯರ ಮೂಲ ಬೃಂದಾವನ ದರ್ಶನ ಮಾಡಿದ್ದಾರೆ. ರಾಯರ ಮೂಲ ಬೃಂದಾವನದಲ್ಲಿ ಈಶ್ವರಪ್ಪ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.