ಹಲಾಲ್ ಮಾಂಸ ನಿಷೇಧಿಸುವ ಮಸೂದೆ ತರಲು ಚಿಂತನೆ

ಬೆಂಗಳೂರು: ಬೆಳಗಾವಿಯಲ್ಲಿ ಆರಂಭವಾಗಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸುವ ಹಲಾಲ್ ವಿರೋಧಿ ಮಸೂದೆಯನ್ನು ಪರಿಚಯಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. FSSAI ಹೊರತುಪಡಿಸಿ ಯಾವುದೇ ಸಂಸ್ಥೆಯಿಂದ ಆಹಾರ ಪ್ರಮಾಣೀಕರಣವನ್ನು ನಿಷೇಧಿಸುವ ಮಸೂದೆಯನ್ನು ತರಲು ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಉಪಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಖಾಸಗಿ ಮಸೂದೆಯಾಗಿ ತರಲು ರವಿಕುಮಾರ್ ಯೋಜಿಸಿದ್ದರು ಎನ್ನಲಾಗಿದೆ.