ವಿಶ್ವಕಪ್ ಹೀರೋಗೆ ಅರ್ಜೇಂಟಿನಾ ಸರ್ಕಾರದಿಂದ ವಿಶೇಷ ಗೌರವ

ವಿಶ್ವಕಪ್ ಹೀರೋಗೆ ಅರ್ಜೇಂಟಿನಾ ಸರ್ಕಾರದಿಂದ ವಿಶೇಷ ಗೌರವ

ಅರ್ಜೆಂಟೀನಾವನ್ನು ವಿಶ್ವ ಚಾಂಪಿಯನ್ ಮಾಡಿದ ನಂತರ ಲಿಯೋನೆಲ್ ಮೆಸ್ಸಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಆದರೆ, ಈಗ ಬರುತ್ತಿರುವ ಸುದ್ದಿ ಇವೆಲ್ಲಕ್ಕಿಂತ ಮಿಗಿಲಾದ್ದದಾಗಿದೆ. ವರದಿ ಪ್ರಕಾರ ಅರ್ಜೆಂಟೀನಾ ಸರ್ಕಾರ ತನ್ನ ದೇಶದ ನೋಟಿನ ಮೇಲೆ ಮೆಸ್ಸಿ ಚಿತ್ರವನ್ನು ಹಾಕುವತ್ತ ಚಿತ್ತ ಹರಿಸಿದಂತೆ. ನೋಟಿನ ಮೇಲೆ ಮೆಸ್ಸಿಯ ಚಿತ್ರವನ್ನು ಮುದ್ರಿಸಿದರೆ, ಒಬ್ಬ ಆಟಗಾರನ ಫೋಟೋ ಆ ದೇಶದ ಕರೆನ್ಸಿಯ ಮೇಲೆ ಮುದ್ರಣಗೊಳ್ಳುವುದು ಇತಿಹಾದಲ್ಲಿ ಇದೇ ಮೊದಲು ಎಂಬ ಖ್ಯಾತಿಗೆ ಮೆಸ್ಸಿ ಪಾತ್ರರಾಗಲಿದ್ದಾರೆ.