ಹುಬ್ಬಳಿಯಲ್ಲಿ ಶಾಲಾ ಆಟೋರಿಕ್ಷಾ ವ್ಯಾನ್‌ , ಬಸ್‌ ಗಳ ಮೇಲೆ ಪೊಲೀಸರ ಕ್ರಮ

ಹುಬ್ಬಳಿಯಲ್ಲಿ ಶಾಲಾ ಆಟೋರಿಕ್ಷಾ ವ್ಯಾನ್‌ , ಬಸ್‌ ಗಳ ಮೇಲೆ ಪೊಲೀಸರ ಕ್ರಮ

ಹುಬ್ಬಳ್ಳಿ: ನಗರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಆಟೋರಿಕ್ಷಾ ವ್ಯಾನ್‌ ಮತ್ತು ಬಸ್‌ಗಳ ವಿರುದ್ಧ ಅವಳಿ ನಗರ ಪೊಲೀಸರು ಸಾಕಷ್ಟು ಪ್ರಕರಣ ದಾಖಲಿಸಿಕೊಂಡಿದೆ.

ಸುಮಾರು 11 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಾಲಾ ವಾಹನಗಳು ತನ್ನ ಮಿತಿಯನ್ನು ಮೀರಿ ಹೆಚ್ಚಿನ ಮಕ್ಕಳನ್ನು ಸಾಗಿಸುವ ಮೂಲಕ ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಬಗ್ಗೆ ಪೋಷಕರಿಂದ ದೂರುಗಳು ಸುರಿಮಳೆಯಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿ ವಾಹನ ಚಾಲನೆಗೆ ನಾವು ಬ್ರೇಕ್ ಹಾಕಬೇಕಿದೆ ಎಂದು ಅವಳಿ ನಗರ ಪೊಲೀಸ್ ಆಯುಕ್ತ ಲಾಭುರಾಮ್ ಹೇಳಿದ್ದಾರೆ.

ಅವಳಿ ನಗರದಲ್ಲಿ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ವಿಶೇಷ ಅಭಿಯಾನ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಈಗ ಶಾಲಾ ಆಟೋ ರಿಕ್ಷಾ ಮತ್ತು ವ್ಯಾನ್‌ಗಳತ್ತ ಗಮನ ಹರಿಸಿದ್ದು, ವಾಹನಗಳಲ್ಲಿ ಸಾಮರ್ಥ್ಯ ಮೀರಿ ಶಾಲಾ ಮಕ್ಕಳನ್ನು ಸಾಗಿಸುವ ಮಾಲೀಕರು ಮತ್ತು ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.