ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ವಿರುದ್ಧ 23 ಸದಸ್ಯರ ಪೈಕಿ 17 ಸದಸ್ಯರು ಕೈ ಎತ್ತಿ ಅವಿಶ್ವಾಸಕ್ಕೆ ಬೆಂಬಲ |Shiggaon|

ಶಿಗ್ಗಾಂವಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ವಿರುದ್ಧ ಮಂಗಳವಾರ ಸದಸ್ಯರು ಮಂಡಿಸಿದ್ದ ಅವಿಶ್ವಾಸಕ್ಕೆ ಜಯ ದೊರೆತಿದೆ. ಪುರಸಭೆಯಲ್ಲಿ 23 ಸದಸ್ಯರಿದ್ದು ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ ಹಾಗೂ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ವಿರುದ್ಧ ಕೆಲ ದಿನಗಳ ಹಿಂದೆ ಅವಿಶ್ವಾಸ ಮಂಡನೆಗೆ ಮನವಿ ಕೊಡಲಾಗಿತ್ತು. ಮಧ್ಯಾಹ್ನ 2:30ಕ್ಕೆ ಸಭೆ ಪ್ರಾರಂಭವಾಗುತ್ತಿದ್ದಂತೆ ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ ಹಾಗೂ ಉಳಿದ ಸದಸ್ಯರು ಮದ್ಯ ವಾಗ್ವಾದ ನಡೆಯಿತು. ಒಬ್ಬರಿಗೊಬ್ಬರು ಏರು ಧ್ವನಿಯಲ್ಲಿ ಮಾತನಾಡಿದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗದ್ದಲ ಪ್ರಾರಂಭವಾಗುತ್ತಿದ್ದಂತೆ ಪೆÇಲೀಸರು ಮದ್ಯ ಪ್ರವೇಶಿ ಸಭೆ ಶಾಂತಗೊಳಿಸಿದರು. ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ,ಅವರ ಪರವಾಗಿ ಯಾರು ವಿಶ್ವಾಸವನ್ನು ತೋರಿಸಿದೆ ತಟಸ್ಥ ಮನೋಭಾವನೆಯನ್ನು ತೋರಿಸಿದರು. ಈ ಸಂದರ್ಭದಲ್ಲಿ 21 ಸದಸ್ಯರು ಸಭೆಯಲ್ಲಿ ಪಾಲ್ಗೊಂಡರೆ ಕೇವಲ 17 ಸದಸ್ಯರು ಕೈ ಎತ್ತಿ ಅವಿಶ್ವಾಸಕ್ಕೆ ಬೆಂಬಲ ವ್ಯಕ್ತಪಡಿಸಿದರು...