ಬಿಬಿಎಂಪಿ ಡಂಪಿಂಗ್ ಯಾರ್ಡ್ ತ್ಯಾಜ್ಯ ಕೆರೆಗೆ ಸೇರಿ ಸಾವಿರಾರು ಮೀನುಗಳ ಮಾರಣಹೋಮ

ಬಿಬಿಎಂಪಿ ಡಂಪಿಂಗ್ ಯಾರ್ಡ್ ತ್ಯಾಜ್ಯ ಕೆರೆಗೆ ಸೇರಿ ಸಾವಿರಾರು ಮೀನುಗಳ ಮಾರಣಹೋಮ

ಆನೇಕಲ್ : ಮಳೆ ನಿಂತರು ಮರದ ಹನಿ ನಿಲ್ಲುವುದಿಲ್ಲ ಎನ್ನುವ ಗಾದೆ ಮಾತಿನಂತೆ ಬಿಬಿಎಂಪಿ ಕಸ ಸುರಿಯುವುದನ್ನು ನಿಲ್ಲಿಸಿದರು ಅದರ ದುಷ್ಟ ಪರಿಣಾಮ ಮಾತ್ರ ನಿಂತಿಲ್ಲ. ಬಿಬಿಎಂಪಿ ಮಾಡಿರುವ ಘನಕಾರ್ಯಕ್ಕೆ ದಿನೇ ದಿನೇ ಅಲ್ಲಿನ ಪರಿಸರ ಹಾಳಾಗುತ್ತಿದೆ . ಪರಿಸರ ಸಂರಕ್ಷಿಸಬೇಕು ಅಂತ ಅದೆಷ್ಟೋ ಪ್ರತಿಭಟನೆಗಳು ಹೋರಾಟಗಳು ನಡೆಸಿದ್ರು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ . ಬಿಬಿಎಂಪಿ ಅಧಿಕಾರಿಗಳು ಮಾಡಿದ ತಪ್ಪಿಗೆ ಇದೀಗ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಿಂಗೀಪುರ ಕೆರೆಯಲ್ಲಿ ಸಾವಿರಾರು ಮೀನುಗಳು ವಿಲವಿಲ ಒದ್ದಾಡಿ ಪ್ರಾಣ ಬಿಡುತ್ತಿವೆ . ಇದಕ್ಕೆಲ್ಲ ಕಾರಣವಾಗಿದ್ದು ಮಾತ್ರ ಬಿಬಿಎಂಪಿ ಅಧಿಕಾರಿಗಳು . ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇಂದು ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ . ಬಿಂಗಿಪುರ ಅಂದ್ರೆ ಸಾಕು ಅದು ಕಸದ ಊರು ಅಂತಾನೆ ಫೇಮಸ್ ಆಗಿದೆ . ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವ ಎಲ್ಲಾ ಕಸಗಳನ್ನು ತಂದು ಬಿಬಿಎಂಪಿ ಇದೇ ಊರಿನ ಡಂಪ್ಪಿಂಗ್ ಯಾರ್ಡ್ ನಲ್ಲಿ ಡಂಪ್ ಮಾಡಿದ್ದಾರೆ . ಸುತ್ತಮುತ್ತಲಿನ ಹತ್ತಾರು ಹಳ್ಳಿ ವಾಸಿಗಳ ಹೋರಾಟದ ಫಲವಾಗಿ ಕಸ ಸುರಿಯುವುದು ನಿಲ್ಲಿಸಿದ್ದಾರೆ . ಆದ್ರೆ ಭೂಮಿಯ ಒಡಲಲ್ಲಿ ಬುಸುಗುಡುತ್ತಿರುವ ಕಸ ಮಾತ್ರ ಅಗ್ಗಿಂದಾಗ್ಗೆ ವಿಷ ಕಾರುತ್ತಲೇ ಇದೆ . ಕಸದ ರಾಶಿಯಿಂದ ಜಿನುಗುತ್ತಿರುವ ದ್ರವ ರೂಪದ ವಿಷ ಮಾತ್ರ ಬೀಂಗಿಪುರ ಕೆರೆಗೆ ಬಂದು ಸೆರ್ತಾಯಿದೆ. ಹೀಗಾಗಿ ಆ ನೀರನ್ನು ಸೇವಿಸಿ ಇದೀಗ ಸಾವಿರಾರು ಮೀನುಗಳು ತಮ್ಮ ಪ್ರಾಣವನ್ನೆ ಕಳೆದುಕೊಂಡಿವೆ . ದಿನೇ ದಿನೇ ಈ ರೀತಿಯಾಗಿ ಮೀನಗಳು ಸಾಯ್ತಾಯಿರುವ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಜೊತೆಗೆ ಹಳ್ಳಿಗೆ ಕುಡಿಯುವ ನೀರಿನ ಮೂಲವಾಗಿದ್ದ ಕೊಳವೆ ಬಾವಿ ಸಹ ಕಲುಷಿತ ನೀರನ್ನೇ ಕಾರುತ್ತಿದ್ದು, ಜನ ಜಾನುವಾರುಗಳಿಗೆ ಏನಾದರು ಆನಾಹುತವಾದರೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರಾದ ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಡಂಪಿಂಗ್ ಯಾರ್ಡ್​​ನಿಂದ ಹೊರ ಹರಿಯುತ್ತಿರುವ ಹಾನಿಕಾರಕ ಕಲ್ಮಶ ಕೆರೆ ಸೇರುತ್ತಿದೆ. ಕೆರೆಯ ನೀರನ್ನು ಕುಡಿದ ಜಾನುವಾರುಗಳು ಮಾರಕ ರೋಗಗಳಿಗೆ ತುತ್ತಾಗುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಈ ಬಗ್ಗೆ ಆನೇಕ ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಜಾನುವಾರುಗಳನ್ನೇ ನಂಬಿ ಬದುಕುವ ರೈತರಿಗೆ ದಿಕ್ಕು ಯಾರು ಎಂದು ರೈತ ಮಹಿಳೆ ವೆಂಕಟಲಕ್ಷ್ಮಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಯಾರೋ ಮಾಡಿದ‌ ತಪ್ಪಿಗೆ ಯಾರಿಗೋ ಶಿಕ್ಷೆ ಅಂದ ಹಾಗೆ ಇದೀಗ ಬಿಬಿಎಂಪಿ ಮಾಡಿದ ತಪ್ಪಿಗೆ ಅಮಾಯಕ ಮೀನುಗಳು ಮತ್ತು ಜಾನುವಾರುಗಳು ಸಾವನ್ನಪ್ತಾಯಿವೆ. ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡ್ರೆ ಜಲಚರ ಜಾನುವಾರುಗಳನ್ನು ಉಳಿಸಬೇಕಿದೆ.