ಪುಟಗೋಸಿ ಪಕ್ಷ ಜೆಡಿಎಸ್ ಇಷ್ಟು ಆಟ ಆಡ್ತಿರಬೇಕಾದರೆ ನಾವೆಷ್ಟು ಆಡಬೇಕು; ಮಾಜಿ ಸಚಿವ ನರೇಂದ್ರಸ್ವಾಮಿ ಕಿಡಿನುಡಿ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷಗಳ ನಾಯಕರ ಪರಸ್ಪರ ವಾಗ್ದಾಳಿ ತಾರಕಕ್ಕೇರಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವಸತಿ ಶಾಲೆ ಉದ್ಘಾಟನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ನರೇಂದ್ರಸ್ವಾಮಿ, ಜೆಡಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಜೆಡಿಎಸ್ ಶಾಸಕ ಅನ್ನದಾನಿ, ಹುಸ್ಕೂರು ವಸತಿ ಶಾಲಾ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇದರ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಕಟ್ಟಡ ಉದ್ಘಾಟನೆಗೆ ಅಡ್ಡಿಪಡಿಸದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಲು ಮುಂದಾಗಿದ್ದು, ಈ ವೇಳೆ ಸಿಡಿದೆದ್ದ ನರೇಂದ್ರ ಸ್ವಾಮಿ, ಪುಟಗೋಸಿ ಪಕ್ಷ ಜೆಡಿಎಸ್ ಇಷ್ಟು ಆಟ ಆಡುತ್ತಿರಬೇಕಾದರೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನವರು ನಾವು ಇನ್ನೆಷ್ಟು ಆಡಬೇಕು ಎಂದು ಹೇಳಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.