'ವೋಟರ್ ಐಡಿ' ಅಕ್ರಮ ಆರೋಪ : ಮಾನನಷ್ಟ ಕೇಸ್ ಹಾಕಿ, ನಾವು ಎದುರಿಸಲು ಸಿದ್ದ ಎಂದ ಡಿಕೆಶಿ

'ವೋಟರ್ ಐಡಿ' ಅಕ್ರಮ ಆರೋಪ : ಮಾನನಷ್ಟ ಕೇಸ್ ಹಾಕಿ, ನಾವು ಎದುರಿಸಲು ಸಿದ್ದ ಎಂದ ಡಿಕೆಶಿ

ಬೆಂಗಳೂರು : ವೋಟರ್ ಐಡಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಡಿಕೆಶಿ ನೀವು ಯಾವ ಕ್ರಮ ಬೇಕಾದರೂ ಜರುಗಿಸಿ, ಅದನ್ನು ಎದುರಿಸಲು ನಾವು ಸಿದ್ದವಿದ್ದೇವೆ, ಮಾನನಷ್ಟೆ ಮೊಕದ್ದಮೆ ಹಾಕಿದರೂ ನಾವು ಎದುರಿಸುತ್ತೇವೆ ಎಂದಿದ್ದಾರೆ.

ಇದರ ಬಗ್ಗೆ ತನಿಖೆ ಆಗಲಿ, ಇದರ ಬಗ್ಗೆ ಚರ್ಚೆ ಆಗಲಿ, ಅವಮಾನ ಆಗಿದ್ದರೆ ಮಾನನಷ್ಟ ಕೇಸ್ ಹಾಕಲಿ ಎಂದು ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ್ದಾರೆ. ಹೊಂಬಾಳೆನೋ, ಇನ್ನೊಬ್ಬನೋ. ತಪ್ಪು ಮಾಡಿದ ಮೇಲೆ ತಪ್ಪೇ ..ತಪ್ಪಿತಸ್ಥರು ಯಾರೇ ಆದರೂ ಕ್ರಮ ಕೈಗೊಳ್ಳಿ ಎಂದು ಸವಾಲ್ ಹಾಕಿದ್ದಾರೆ.