ವಿದ್ಯಾರ್ಥಿಗಳೊಂದಿಗೆ ಬಸ್ ಡಿಪೆÇೀಗೆ ಶಾಸಕ ಭೇಟಿ; ಬಸ್ ಓಡಿಸಲು ಅಧಿಕಾರಿಗಳಿಗೆ ಸೂಚನೆ | Bidar |

ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ವಿದ್ಯಾರ್ಥಿಗಳೊಂದಿಗೆ ಬಸ್ ಡಿಪೆÇೀಗೆ ಭೇಟಿ ನೀಡಿ ಬಸ್ ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಲವು ವಿದ್ಯಾರ್ಥಿಗಳು ಬಸ್ ಡಿಪೆÇೀ ಅಧಿಕಾರಿಗಳಿಗೆ ಭೇಟಿಯಾಗಲು ಬಂದಿದ್ದರು. ಬಸ್ ಡಿಪೆÇೀ ಮಾರ್ಗದಿಂದ ಬೆಳಗ್ಗೆ ಕಾಕನಾಳಗೆ ತೆರಳುತ್ತಿದ್ದ ಶಾಸಕರು ಅಲ್ಲಿಯೇ ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳನ್ನು ನಿಂತಿದ್ದನ್ನು ಕಂಡು ತಕ್ಷಣಕ್ಕೆ ತಮ್ಮ ವಾಹನ ನಿಲ್ಲಿಸಿ ವಿದ್ಯಾರ್ಥಿಗಳ ಗೋಳು ಆಲಿಸಿ ವಿದ್ಯಾರ್ಥಿಗಳೊಂದಿಗೆ ಖುದ್ದು ಶಾಸಕರು ಬಸ್ ಡಿಪೆÇೀಗೆ ಬಂದು ಅಲ್ಲಿನ ಅಧಿಕಾರಿಗಳಿಗೆ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣದಿಂದಲೇ ಗಡಿ ಭಾಗದ ಭಾಟಸಾಂಗವಿಗೆ ಬಸ್ ಸೇವೆ ಆರಂಭಿಸಬೇಕು ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಬಸ್ ಸೇವೆ ಒದಗಿಸಿ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.