ಇವ್ರು ಮನುಷ್ಯರೋ, ರಾಕ್ಷಸರೋ : ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆಗೆ ಸಿದ್ಧರಾಮಯ್ಯ ಟಾಂಗ್

ಇವ್ರು ಮನುಷ್ಯರೋ, ರಾಕ್ಷಸರೋ : ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆಗೆ ಸಿದ್ಧರಾಮಯ್ಯ ಟಾಂಗ್

ಬಾಗಲಕೋಟೆ: ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂಬುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದರು. ಅವರು ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ ಎಂಬುದಾಗಿ ಸಿದ್ಧರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ.

ನಿನ್ನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಂತ ಪ್ರಜಾಧ್ವನಿ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಯಿಂದಲೇ ಅವರ ವ್ಯಕ್ತಿತ್ವ ಎಂಥದ್ದು ಎಂಬುದು ಗೊತ್ತಾಗುತ್ತದೆ. ನೀವೇ ಅವರು ಮನುಷ್ಯರೋ, ರಾಕ್ಷಸರೋ ಎಂಬುದನ್ನು ತಿಳಿದುಕೊಳ್ಳಿ ಎಂದರು.

ನಾನು ಟಿಪ್ಪು, ಬಸವಣ್ಣ, ಬುದ್ಧ ಎಲ್ಲರನ್ನು ಗೌರವಿಸುತ್ತೇನೆ. ನಾನು ಮನುಷ್ಯತ್ವ ಇರೋರವನ್ನು ಎಲ್ಲರನ್ನು ಸಮಾನರೆಂದೇ ಭಾವಿಸುತ್ತೇನೆ. ಹಿಂದೂ, ಮುಸ್ಲೀಂ, ಕ್ರೈಸ ಸೇರಿ ಎಲ್ಲರನ್ನು ಪ್ರೀತಿಸುವುದಾಗಿ ಹೇಳಿದರು.

ಟಿಪ್ಪು ಸುಲ್ತಾನ್ ಮಾದರಿಯಲ್ಲೇ ಸಿದ್ದರಾಮಯ್ಯ ಹೊಡೆದು ಹಾಕಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಅಶ್ವತ್ಥ್ ನಾರಾಯಣ

ಮಂಡ್ಯ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ನಾಯಕರ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ಬಿಜೆಪಿ- ಕಾಂಗ್ರೆಸ್ ನಾಯಕ ನಡುವೆ ಮಾತಿನ ವಾಕ್ಸಮರ ಉಂಟಾಗಿದೆ.ಕಾಂಗ್ರೆಸ್ ಮೊದಲಿನಿಂದಲೂ ಟಿಪ್ಪು ಪರವಾಗಿ ಮಾತನಾಡುತ್ತಲೇ ಬಂದಿದ್ರೆ, ಬಿಜೆಪಿ ಆತ ಒಬ್ಬ ದೇಶದ್ರೋಹಿ ಎಂದು ವಿರೋಧಿಸುತ್ತಲೇ ಬಂದಿದೆ. ಆದರೆ ಇದೀಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ಮಾದರಿಯಲ್ಲೇ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಬಳಿ ನಿಮಗೆ ಸಾವರ್ಕರ್ ಬೇಕಾ? ಟಿಪ್ಪು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಾವರ್ಕರ್ ಬೇಕು ಎಂಬ ಉತ್ತರ ಬಂದಿದ್ದೆ. ಹೀಗಾಗಿ ಈ ಹೇಳಿಕೆ ನೀಡಿದ್ದಾರೆ.