ಕಾಶ್ಮೀರ ದೇಶದ ಭಾಗವೆಂದು ಪರಿಗಣಿಸದವರು ಕಾಂಗ್ರೆಸ್‌ನಲ್ಲಿ ಇರಬೇಕೇ: ಕಾಂಗ್ರೆಸ್ಸಿಗೆ ಅದೇ ಪಕ್ಷದ ನಾಯಕನ ಪ್ರಶ್ನೆ  

ಕಾಶ್ಮೀರ ದೇಶದ ಭಾಗವೆಂದು ಪರಿಗಣಿಸದವರು ಕಾಂಗ್ರೆಸ್‌ನಲ್ಲಿ ಇರಬೇಕೇ: ಕಾಂಗ್ರೆಸ್ಸಿಗೆ ಅದೇ ಪಕ್ಷದ ನಾಯಕನ ಪ್ರಶ್ನೆ  

ಕಾಶ್ಮೀರ ದೇಶದ ಭಾಗವೆಂದು ಪರಿಗಣಿಸದವರು ಕಾಂಗ್ರೆಸ್‌ನಲ್ಲಿ ಇರಬೇಕೇ: ಕಾಂಗ್ರೆಸ್ಸಿಗೆ ಅದೇ ಪಕ್ಷದ ನಾಯಕನ ಪ್ರಶ್ನೆ
 
ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸದವರು ಪಂಜಾಬ್ ಕಾಂಗ್ರೆಸ್‌ನಲ್ಲಿ ಇರಬೇಕೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಸೋಮವಾರ ಪಕ್ಷವನ್ನುಒತ್ತಾಯಿಸಿದ್ದಾರೆ.
ಈ ರೀತಿಯ ಜನರು ಈ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಅಣುಕಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಾದ ಮಲ್ವಿಂದರ್ ಸಿಂಗ್ ಮಾಲಿ ಮತ್ತು ಪ್ಯಾರೆಲಾಲ್ ಗರ್ಗ್ ಅವರು ಜಮ್ಮು-ಕಾಶ್ಮೀರಕ್ಕೆ ಸಂಬAಧಿಸಿದAತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಮನೀಶ ತಿವಾರಿ ಹೇಳಿಕೆ ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಮನೀಷ್ ತಿವಾರಿ, ಜಮ್ಮು ಮತ್ತು ಕಾಶ್ಮೀರವನ್ನು ನಮ್ಮ ದೇಶದ ಭಾಗವೆಂದು ಪರಿಗಣಿಸದವರು ಮತ್ತು ಪಾಕಿಸ್ತಾನದ ಪರ ಒಲವು ಹೊಂದಿರುವ ವ್ಯಕ್ತಿಗಳು ಪಂಜಾಬ್ ಕಾಂಗ್ರೆಸ್‌ನ ಭಾಗವಾಗಿ ಇರಬೇಕೇ?. ಈ ಬಗ್ಗೆ ಆತ್ಮಾವಲೋಕನ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರನ್ನು ನಾನು ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೆ ಮೊದಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೂಡ ಸಿಧು ಅವರ ಸಲಹೆಗಾರರ ಹೇಳಿಕೆಗಳಿಗೆ ಖಂಡಿಸಿದ್ದರು.
ಈ ರೀತಿಯ ಹೇಳಿಕೆಗಳು ದೇಶ ಮತ್ತು ರಾಜ್ಯದ ಶಾಂತಿಗೆ ಧಕ್ಕೆ ಉಂಟು ಮಾಡಬಹುದು. ನೀವು ಸಿಧು ಅವರಿಗೆ ಮಾತ್ರ ಸಲಹೆಗಳನ್ನು ನೀಡಿ. ತಿಳಿಯದ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಬೇಡಿ ಎಂದು ಅಮರಿಂದರ್ ಸಿಂಗ್ ಖಾರವಾಗಿ ಹೇಳಿದ್ದರು.