ತೆಲಂಗಾಣದಲ್ಲಿ 'ವಂದೇ ಭಾರತ್ ಎಕ್ಸ್ ಪ್ರೆಸ್' ರೈಲಿನ ಮೇಲೆ ಕಲ್ಲು ತೂರಾಟ

ತೆಲಂಗಾಣದಲ್ಲಿ 'ವಂದೇ ಭಾರತ್ ಎಕ್ಸ್ ಪ್ರೆಸ್' ರೈಲಿನ ಮೇಲೆ ಕಲ್ಲು ತೂರಾಟ

ತೆಲಂಗಾಣ : ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರೈಲಿಗೆ ಆಗಿರುವ ಹಾನಿಯನ್ನು ಇನ್ನೂ ಅಂದಾಜಿಸಬೇಕಾಗಿದ್ದು, ರೈಲು ವಿಶಾಖಪಟ್ಟಣಂ ತಲುಪಿದ ನಂತರ ಪತ್ತೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ, ಒಂದು ಗಾಜಿನ ಫಲಕಕ್ಕೆ ಹಾನಿಯಾಗಿದೆ ಎಂದು ವರದಿಗಳು ಉಲ್ಲೇಖಿಸುತ್ತಿವೆ.

ವರದಿ ಪ್ರಕಾರ ಕೆಲ ಮಕ್ಕಳು ರೈಲ್ವೇ ಕೋಚ್ ಮೇಲೆ ಕಲ್ಲು ತೂರಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು.