ಬ್ರಾಹ್ಮಣರ ವಿರುದ್ದ ಟೀಕೆ ಆರೋಪ: ವಿಚಾರಣೆಗೆ ಹಾಜರಾದ ನಟ ಚೇತನ್

ಬೆಂಗಳೂರು: ಬ್ರಾಹ್ಮಣರ ವಿರುದ್ದ ಟೀಕೆ ಆರೋಪ ಹೊತ್ತಿರುವ ನಟ ಅಹಿಂಸಾ ಚೇತನ್ ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸದ್ಯ ಅವರ ಮೇಲೆ ವಿಪ್ರ ಸಂಘಟನೆಯ ಪವನ್ ಕುಮಾರ್ ಶರ್ಮರಿಂದ ದೂರು ದಾಖಲಾಗಿದ್ದು, ಪಿಎಸ್‌ಐ ಮುರಳಿಯವರ ಎದುರಿಗೆ ವಿಚಾರಣೆ ಕಾರಣ ಚೇತನ್ ಹಾಜರಾಗಿದ್ದಾರೆ.
ಬ್ರಾಹ್ಮಣ ಹಾಗು ಬ್ರಾಹ್ಮಣ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ ಎಂಬ ಕಾರಣ ಚೇತನ್ ವಿರುದ್ಧ ಬ್ರಾಹ್ಮಣ ಸಮುದಾಯದವರು ಅಸಮಾಧಾನಗೊಂಡು ದೂರು ನೀಡಿದ್ದಾರೆ. ಅವರ ವಿರುದ್ದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ಚೇತನ್ ಅವರನ್ನು ಕೇಳಲು ಬಸವನಗುಡಿ ಪೊಲೀಸರು 30ಕ್ಕೂ ಹೆಚ್ಚು ಪ್ರಶ್ನೆಗಳನ್ನ ರೆಡಿಮಾಡಿಕೊಂಡಿದ್ದಾರೆ. ಮಾತನಾಡಿರುವ ವಿಡಿಯೋ ನಿಮ್ಮದೇನಾ? ನಿಮ್ಮ ಪಾಸ್ ಪೋರ್ಟ್ ನಂಬರ್ ಏನು? ವೀಸಾ ಮಾಹಿತಿ ತಿಳಿಸಿ? ನೀವು ಮಾನಸಿಕವಾಗಿ ದೃಢವಾಗಿದ್ದೀರಾ? ನಿಮ್ಮ ಹೇಳಿಕೆಗೆ ಕಾರಣ ಮತ್ತು ಸಮರ್ಥನೆ ಏನು? ಸೇರಿದಂತೆ ಅನೇಕ ಪ್ರಶ್ನೆಗಳನ್ನು ಚೇತನ್ ಅವರಿಗೆ ಕೇಳಲಾಗುತ್ತೆ.