ಇಂದು ʻಶೃಂಗೇರಿ ಶಾರದಾಂಬೆʼ ದರ್ಶನ ಪಡೆಯಲಿರುವ ʻಜೆ ಪಿ ನಡ್ಡಾʼ

ಇಂದು ʻಶೃಂಗೇರಿ ಶಾರದಾಂಬೆʼ ದರ್ಶನ ಪಡೆಯಲಿರುವ ʻಜೆ ಪಿ ನಡ್ಡಾʼ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದು, ಇಂದು ಚಿಕ್ಕಮಗಳೂರು, ಹಾಸನ, ಶೃಂಗೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ಬಿಜೆಪಿ ಪರ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಭಾನುವಾರ ರಾತ್ರಿ ರಾಜ್ಯಕ್ಕೆ ಆಗಮಿಸಿರುವ ಜೆ.ಪಿ. ನಡ್ಡಾ ಅವರು, ಚಿಕ್ಕಮಗಳೂರು, ಹಾಸನ, ಶೃಂಗೇರಿಗೆ ಭೇಟಿ ನೀಡಲಿದ್ದಾರೆ. ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಶಾರದಾಂಬೆಯಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯಲಿದ್ದಾರೆ.ಇನ್ನೂ, ಹಾಸನ ಜಿಲ್ಲೆ ಬೇಲೂರಿಗೂ ಭೇಟಿ ನೀಡಲಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ನಡ್ಡಾ ಭಾಗಿಯಾಗಿದ್ದಾರೆ.