ಭೋಜನದ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಆರಂಭ: ವಿವಾದಿತ ಮತಾಂತರ ನಿಷೇಧ ಕಾಯ್ದೆ ಮಂಡನೆ.?

ಭೋಜನದ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಆರಂಭ: ವಿವಾದಿತ ಮತಾಂತರ ನಿಷೇಧ ಕಾಯ್ದೆ ಮಂಡನೆ.?

ಬೆಳಗಾವಿ: ಇಂದು ಭೋಜನ ವಿರಾಮದ ಬಳಿಕ ವಿಧಾನಪರಿಷತ್ ಆರಂಭಗೊಳ್ಳುತ್ತಿದ್ದಂತೇ, ಸಭಾಪತಿ ಬಸವರಾಜ ಹೊರಟ್ಟಿಯವರು ಇದುವರೆದೆ ಸಭಾನಾಯಕರ ಮನವಿ ಮೇರೆಗೆ ಕಲಾಪವನ್ನು ಮುಂದೂಡಲಾಗಿತ್ತು. ಮತ್ತೆ ಈಗ ಆರಂಭಿಸಲಾಗಿದೆ. ಆ ಬಗ್ಗೆ ಇಲ್ಲಿನ ಕೆಲ ಸದಸ್ಯರಿಗೂ ಮಾಹಿತಿ ನೀಡಲಾಗಿದೆ ಎಂಬುದಾಗಿ ತಿಳಿಸಿದರು.

ಇದರ ನಡುವೆಯೂ ಪರಿಷತ್ ನಲ್ಲಿ ಗದ್ದಲ-ಕೋಲಾಹರ ಉಂಟಾಗಿದೆ. ಇದರ ನಡುವೆಯೂ ಮತಾಂತರ ನಿಷೇಧ ಕಾಯ್ದೆ ಮಂಡನೆ ಆಗುತ್ತಾ.? ಪಾಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಐದು ನಿಮಿಷ ಮತ್ತೆ ಮುಂದೂಡಿ, ಸಿಎಂ ಜೊತೆಗೆ ಚರ್ಚಿಸಿ ಸದನ ಮತ್ತೆ ಆರಂಭಿಸುವಂತೆ ಸಭಾಧ್ಯಕ್ಷರನ್ನು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದಂತ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್, ನಮಗೆ ಸರಿಯಾಗಿ ಗೌರವ ಕೊಟ್ಟಿದ್ದೀರಿ. ನಮ್ಮನ್ನು ರಬ್ಬರ್ ಸ್ಟಾಂಫ್ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ, ಮತ್ತೆ ಸದನ ಮುಂದೂಡಿಕೆ ಮಾಡಬಾರದು ಎಂಬುದಾಗಿ ಹೇಳಿದರು. ಹೀಗೆ ಭೋಜನ ವಿರಾಮದ ನಂತ್ರ ಆರಂಭವಾದಂತ ವಿಧಾನಪರಿಷತ್ ಕಲಾಪದಲ್ಲಿ ರಾಜ್ಯ ಸರ್ಕಾರ ವಿವಾದಿತ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸೋ ಯತ್ನದಲ್ಲಿ ತೊಡಗಿದೆ. ಇಂದು ಮತಾಂತರ ನಿಷೇಧ ಕಾಯ್ದೆ ಪರಿಷತ್ ನಲ್ಲಿ ಮಂಡನೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.