ಕೋವಿಡ್ ಲಸಿಕಾ ಅಭಿಯಾನಕ್ಕೆ ಒಂದು ವರ್ಷ: ವಿಶ್ವಕ್ಕೆ ಮಾದರಿ - ಸಿಎಂ ಬೊಮ್ಮಾಯಿ*
ಕೋವಿಡ್ ಲಸಿಕಾ ಅಭಿಯಾನ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಮಸ್ತ ದೇಶದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೊರೋನಾ ವಿರುದ್ಧ ದೇಶ ದಿಟ್ಟತನದಿಂದ ಹೋರಾಡಿದ್ದು ವಿಶ್ವಕ್ಕೆ ಮಾದರಿಯಾಗಿದೆ. ಇಲ್ಲಿಯವರಿಗೆ, ರಾಜ್ಯದಲ್ಲಿ 9.12 ಕೋಟಿ ಲಸಿಕೆ ಸೇರಿದಂತೆ, ದೇಶದಲ್ಲಿ 156 ಕೋಟಿಗೂ ಅಧಿಕ ಲಸಿಕೆ ಡೋಸ್ ನೀಡಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
9ಲೈವ್ ಬೆಂಗಳೂರು