ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್‌ ಧ್ವನಿ: ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯ

ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್‌ ಧ್ವನಿ: ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯ

ಹಾವೇರಿ: ಕಾಂಗ್ರೆಸ್‌ ನಡೆಸುತ್ತಿರುವ ​​​ ಪ್ರಜಾಧ್ವನಿ ಯಾತ್ರೆ ಕುರಿತು ಸಿ.ಟಿ ರವಿ ಕಿಡಿಕಾರಿದ್ದಾರೆ. ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್‌ ಧ್ವನಿ ಎಂದು ಶಾಸಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ನಾಯಕರು ನಮ್ಮನ್ನು ಬೈಯ್ಯುವುದಕ್ಕೆ ಇರೋದು.ನಿಂದಿಕರಿರಬೇಕು ಡ್ಯಾಶ್‌ ಡ್ಯಾಶ್‌ ಎಂದು ಪರೋಕ್ಷವಾಗಿ ಕಾಂಗ್ರೆಸ್ಸಿಗರನ್ನು ಹಂದಿಗಳಿಗೆ ಸಿ.ಟಿ ರವಿ ಹೋಲಿಸಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರದ ಕುರಿತಂತೆ ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.ನನ್ನ ಲೆಕ್ಕಚಾರದ ಪ್ರಕಾರ ಸಿದ್ದರಾಮಯ್ಯಗೆ ಸೇಫ್ ಅಂದ್ರೆ ಪಾಕಿಸ್ತಾನ, ಸಿದ್ದರಾಮಯ್ಯ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನ, ಅಲ್ಲಿ ಮೋದಿ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಇಲ್ಲ. ಅಲ್ಲಿಗೆ ಹೋದ್ರೆ ಕಾಟ ಕೊಡಲು ಡಿಕೆಶಿ, ಖರ್ಗೆ ಕೂಡ ಇರುವುದಿಲ್ಲ. ಹೀಗಾಗಿ ಪಾಕಿಸ್ತಾನ ಸಿದ್ದರಾಮಯ್ಯಗೆ ಸೇಫ್ ಜಾಗ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.