ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಅಪಾಯ: ಆರ್‌ಬಿಐ

ಹೊಸದಿಲ್ಲಿ: ಹಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್)ಯನ್ನು ಮರುಜಾರಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಅಪಾಯಕಾರಿಯಾಗಿದ್ದು, ಇಂಥ ನಿರ್ಧಾರಗಳು ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಸಿದೆ.
“ಸ್ಟೇಟ್ ಫೈನಾನ್ಸ್: ಎ ಸ್ಟಡಿ ಆಫ್ ಬಜೆಟ್ ಆಫ್ 2022-23′ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ ಆರ್‌ಬಿಐ ಈ ವಿಚಾರವನ್ನು ಗಮನಿಸಿದೆ.
ಇತ್ತೀಚೆಗಷ್ಟೇ ರಾಜಸ್ಥಾನ, ಛತ್ತೀಸ್‌ಗಢ, ಝಾರ್ಖಂಡ್ ಸರಕಾರಗಳು ಕೇಂದ್ರ ಸರಕಾರ ಹಾಗೂ ಪಿಎಫ್‌ಆರ್‌ಡಿಎಗೆ ತಮ್ಮ ರಾಜ್ಯದ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ್ದವು. ಈ ಹಿನ್ನೆಲೆ ಆರ್ಥಿಕ ತಜ್ಞರು ಹಾಗೂ ಆರ್‌ಬಿಐ ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದು, ಇಂಥ ನಿರ್ಣಯ ರಾಜ್ಯಗಳ ಬೊಕ್ಕಸದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೇ ಆರ್ಥಿಕ ವ್ಯವಸ್ಥೆಯನ್ನೂ ಬುಡಮೇಲು ಮಾಡುತ್ತದೆ ಎಂದಿದೆ.