ಈ ವಿಷಯಗಳನ್ನು ಕೈಬಿಡಲು ಬಿಜೆಪಿ ಸಿದ್ಧವೇ.?: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: 'ಅಭಿವೃದ್ಧಿಯ ಚರ್ಚೆ ಬಿಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ' ಎಂದ ನಳೀನ್ ಕುಮಾರ್ ಕಟೀಲ್ ಅವರೇ, 'ಕೋಮುವಾದ ಬಿಡಿ' ಎಂಬ ಮೋದಿಯವರ ಸೂಚನೆ ಪಾಲಿಸುವುದು ಬಿಜೆಪಿಗೆ ಸಾಧ್ಯವೇ? ಹಲಾಲ್, ಜಟ್ಕಾ, ಹಿಜಾಬ್, ವ್ಯಾಪಾರ ನಿಷೇಧ, ಆಜಾನ್, ಲವ್ ಜಿಹಾದ್ ಮುಂತಾದ ದ್ವೇಷದ ವಿಷಯಗಳನ್ನು ಕೈಬಿಡಲು ಬಿಜೆಪಿ ಸಿದ್ದವೇ?ಬಿಟ್ಟರೆ ಬಿಜೆಪಿ ಬದುಕಲು ಸಾಧ್ಯವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟ್ ನಲ್ಲಿ ಪ್ರಶ್ನಿಸಿದೆ.