ಕಾಂತಾರ ಸಿನಿಮಾಗಾಗಿ ರಿಷಬ್​ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕಾಂತಾರ ಸಿನಿಮಾಗಾಗಿ ರಿಷಬ್​ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕಾಂತಾರ ದೊಡ್ಡ ಸಕ್ಸಸ್ ಆಯ್ತು. ದಾಖಲೆಯ ಕಲೆಕ್ಷನ್ ಮಾಡ್ತು. ಟೆಕ್ನಿಷಿಯನ್ಸ್​ಗಂತೂ ಡಬಲ್ ಪೇಮೆಂಟ್​ ಮಾಡಿದ್ರಂತೆ. ಇಷ್ಟು ದಿನದ ಅಂತೆ ಕಂತೆ ಬಿಟ್ಟಾಕಿ. ನಾವೀಗ ಕಾಂತಾರದಿಂದ ರಿಷಬ್ ಶೆಟ್ಟಿ ಸಿಕ್ಕ ಎಕ್ಸ್ಟ್ರಾ ಪೇಮೆಂಟ್​ ಎಷ್ಟು ಅನ್ನೋ ಪಕ್ಕಾ ಮಾಹಿತಿ ಲಭ್ಯವಾಗಿದೆ.

ಸಂಭಾವನೆ ಮಾತ್ರವಲ್ಲ, ಕಾಂತಾರ 2 ಚಿತ್ರಕ್ಕಾಗಿ ಹೊಂಬಾಳೆ ಅವ್ರು ಕೊಡ್ತಿರೋ ಬಜೆಟ್​ ಎಷ್ಟು ಗೊತ್ತಾ! ಕಳೆದ ಆರು ತಿಂಗಳಿಂದ ಕಾಂತಾರ ಸಿನಿಮಾದ ಪ್ರತಿ ಅಪ್​ಡೇಟ್​ ಕೂಡ ನಿಮ್ಮ ಮುಂದೆ ಇಡ್ತಾನೆ ಬಂದಿದ್ದೇವೆ. ಕಾಂತಾರ ಸಕ್ಸಸ್, ಕಾಂತಾರ ಕಲೆಕ್ಷನ್, ಕಾಂತಾರ ರೆಕಾರ್ಡ್, ರಿಷಬ್ ಶೆಟ್ಟಿ ಮುಂದಿನ ನಡೆ, ಕಾಂತಾರ ಪಾರ್ಟ್ 2 ಸೇರಿ ಕಾಂತಾರ ಸಕ್ಸಸ್​ನಿಂದ ಟೆಕ್ನಿಷಿಯನ್ಸ್​ಗೆ ಡಬಪ್ ಪೇಮೆಂಟ್​ ಸಿಕ್ಕಿದ್ದನ್ನ ಕೂಡ ಎಕ್ಸ್​ಕ್ಲೂಸಿವ್​ ಮಾಹಿತಿ ನೀಡಿದ್ವಿ.

ಕಾಂತಾರ ಸಿನಿಮಾ ಬಹುದೊಡ್ಡ ಗಳಿಕೆ ಕಂಡಿದೆ. ಕೇವಲ 16 ಕೋಟಿ ಬಜೆಟ್​ನಲ್ಲಿ ತಯಾರಾಗಿದ್ದ ಚಿತ್ರ ವರ್ಲ್ಡ್​ವೈಡ್​​ 400 ರಿಂದ 450 ಕೋಟಿವರೆಗೂ ಬಾಚಿಕೊಂಡಿತ್ತು. 16 ಕೋಟಿ ಎಲ್ಲಿ 450 ಕೋಟಿ ಎಲ್ಲಿ. ಇಷ್ಟು ಕಡಿಮೆ ಬಜೆಟ್​ನಲ್ಲಿ ಇಷ್ಟು ದೊಡ್ಡ ಕಲೆಕ್ಷನ್ ಮಾಡಿರೋ ಹೊಂಬಾಳೆ ಫಿಲಂಸ್​ಗೆ ಸಖತ್ ಆಗಿಯೇ ಲಾಭ ಬಂದಿದೆ. ಇಷ್ಟು ಲಾಭ ಮಾಡಿದ್ಮೇಲೆ ಆರ್ಟಿಸ್ಟ್​, ಟೆಕ್ನಿಷಿಯನ್​ಗೆ ಬೋನಸ್ ಏನೂ ಕೊಟ್ಟಿರಲ್ವಾ? ಗಿಫ್ಟ್ ಏನು ಕೊಟ್ಟಿರಲ್ವಾ ಅಂತ ಕೇಳಿದ್ರೆ ಯೆಸ್ ಕಾಂತಾರ ಸಕ್ಸಸ್​ ನಂತರ ಚಿತ್ರದ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ ಹೆಚ್ಚುವರಿ ಪೇಮೆಂಟ್​ ಕೊಟ್ಟಿದ್ರಂತೆ. ಈ ವಿಷ್ಯವನ್ನ ರಾಂಪಾ ಪಾತ್ರಧಾರಿ ಪ್ರಕಾಶ್ ತುಮಿನಾಡು ಈ ಹಿಂದೆಯೇ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಎಕ್ಸ್​ಕ್ಲೂಸಿವ್ ಆಗಿ ಬಹಿರಂಗಪಡಿಸಿದ್ರು.

ಕಾಂತಾರಗಾಗಿ ರಿಷಬ್ ತಗೊಂಡಿದ್ದ ಸಂಭಾವನೆ ಎಷ್ಟು?
ಕಾಂತಾರ ಸಕ್ಸಸ್​ ನಂತರ ಶೆಟ್ರಿಗೆ ಸಿಕ್ಕ ಪೇಮೆಂಟ್ ಎಷ್ಟು?

ಕಾಂತಾರ ಸಿನಿಮಾ ಮಾಡಬೇಕು ಅಂತ ಡಿಸೈಡ್ ಆಗಿ ಹೊಂಬಾಳೆ ಫಿಲಂಸ್ ಜೊತೆ ಕೈ ಜೋಡಿಸಿದಾಗ ರಿಷಬ್ ಶೆಟ್ಟಿ ತೆಗೆದುಕೊಂಡ ಸಂಭಾವನೆ ಅಂದಾಜು 3 ಕೋಟಿ. ನಟನೆ ಮತ್ತು ನಿರ್ದೇಶನ ಎರಡೂ ಸೇರಿ ಮೂರು ಕೋಟಿ ಪಡೆದುಕೊಂಡಿದ್ದರು. ಕಾಂತಾರ ಪ್ಯಾನ್ ಇಂಡಿಯಾ ಸಕ್ಸಸ್​ ಕಂಡ ಬಳಿಕ ಶೆಟ್ರಿಗೆ ಜೇಬಿಗೆ ಭಾರಿ ಮೊತ್ತವನ್ನೇ ಹಾಕಿದ್ದಾರಂತೆ ಹೊಂಬಾಳೆ ಫಿಲಂಸ್. ಬರೀ ಎಕ್ಸ್ಟಾ ಸಂಭಾವನೆ ಮಾತ್ರವಲ್ಲ ದುಬೈ ಟೂರ್​ನ ಖರ್ಚು ಪೂರ್ತಿ ಕಾಂತಾರ ನಿರ್ಮಾಪಕರದ್ದೇ ಅಂತೆ. ಕಾಂತಾರ ಸಕ್ಸಸ್​ ನಂತರ ರಿಷಬ್ ಶೆಟ್ಟಿ ಕೈಗೆ ಹೆಚ್ಚುವರಿ ಸಿಕ್ಕಿದ್ದೆಷ್ಟು ಕೋಟಿ ಅಂತ ನೋಡಿದ್ರೆ ತಮ್ಮ ಸಿನಿಮಾದ ಬಜೆಟ್​ಗಿಂತ ಜಾಸ್ತಿ ಅಂತೆ. ಕಾಂತಾರ ಯಶಸ್ಸಿನ ಬಳಿಕ ದುಬೈ ಟ್ರಿಪ್ ಹೊರತುಪಡಿಸಿ ಭಾರಿ ಮೊತ್ತವನ್ನೇ ಶೆಟ್ರ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಿದೆಯಂತೆ ಹೊಂಬಾಳೆ ಫಿಲಂಸ್.