ರಸ್ತೆ ಗುಂಡಿ ತಪ್ಪಿಸಲು ಹೋಗಿ ವ್ಯಕ್ತಿ ಬಲಿ | Bangalore |
ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯಾ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಜಯನಗರ ನಿವಾಸಿ ಖುರ್ಷಿದ್ ಅಹಮ್ಮದ್ (60) ಸಾವನ್ನಪ್ಪಿದ ಬೈಕ್ ಸವಾರ. ಕಳೆದ 8 ದಿನದ ಹಿಂದೆಯೂ ರಸ್ತೆ ಗುಂಡಿಯಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಆಗಲೂ ರಸ್ತೆಗುಂಡಿಯನ್ನು ಮುಚ್ಚಿಸೋದಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಮಳೆ ಬಂದಾಗ ಗುಂಡಿ ಎಲ್ಲಿದೆ ಅನ್ನೋದು ತಿಳಿಯೋದಿಲ್ಲ. ಇದೇ ರಸ್ತೆಯಲ್ಲೇ 10 ಕ್ಕೂ ಹೆಚ್ಚು ರಸ್ತೆ ಗುಂಡಿಗಳಿವೆಅನೇಕ ಬಾರಿ ಹೇಳಿದ್ರೂ ಕೂಡಾ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೆÇಲೀಸರು ಭೇಟಿ, ಪರಿಶೀಲಿಸಿ ಸ್ಥಳೀಯರ ಬಳಿ ಮಾಹಿತಿ ಪಡೆದರು.