ಕಲಾವಿದರಿಗಾಗಿಯೇ ಹುಟ್ಟಿಕೊಂಡ ಧಾರವಾಡ ಟಾಲ್ಕಿಸ್
ಕಲೆ ಎನ್ನುವುದು ಯಾರ ಸ್ವತ್ತೂ ಅಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದ್ರೆ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಇಲ್ಲದೇ ಅನೇಕ ಪ್ರತಿಭೆಗಳು ಕಮರಿ ಹೋಗುತ್ತಿವೆ. ಹೀಗಾಗಿಯೇ ನಟನೆಯಲ್ಲಿ ಆಸಕ್ತಿ ವಹಿಸಿ ನಟರಾಗಬೇಕು ಎಂಬ ಆಸೆ ಇಟ್ಟುಕೊಂಡವರಿಗೆ ಧಾರವಾಡದಲ್ಲೇ ಕಲಾವಿದರಿಗೆ ಇದೀಗ ವೇದಿಕೆ ಸಜ್ಜಾಗಿದೆ. ಎನ್ನಿದು ಅಂತಿರಾ ಈ ಸ್ಟೋರಿ ನೋಡಿ.ಧಾರವಾಡದ ಬೇಂದ್ರೆ ಭವನದ ಹಿಂಭಾಗದಲ್ಲಿರುವ ಪ್ರಕೃತಿ ಸೇವಾ ಟ್ರಸ್ಟ್ ಹಾಗೂ ಧಾರವಾಡ ರಂಗಾಯಣದಲ್ಲಿ ಆಡಿಷನ್ ಹಮ್ಮಿಕೊಳ್ಳಲಾಗಿತ್ತು. ಈ ಆಡಿಷನ್ಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಯುವ ಕಲಾವಿದರು ಬಂದು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು. ಈ ಆಡಿಷನ್ನಲ್ಲಿ ಆಯ್ಕೆಯಾದ ಕಲಾವಿದರಿಗೆ ಸ್ವತಃ ಧಾರವಾಡ ಟಾಲ್ಕಿಸ್ ವೇದಿಕೆ ಕಲ್ಪಿಸಿಕೊಡಲಿದೆ ಎಂಬುದು ವಿಶೇಷ. ಇನ್ನು ಈ ಅಡಿಸನ್ ಗೆ ಬೇರೆ ಬೇರೆ ಜಿಲ್ಲೆಯ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಬಾಗಿಯಾಗಿದ್ದಾರೆ. ಅಲ್ಲದೇ ಹಿರಿಯ ಕಲಾವಿದರೂ ಕೂಡ ಪಾಲ್ಗೊಂಡಿದ್ದು, ವಿಷೇಶವಾಗಿತ್ತು. ಪ್ರತಿಭೆ ಇದ್ದರೂ ಅದನ್ನು ಪ್ರದರ್ಶನ ಮಾಡುವುದಕ್ಕಾಗಿ ಹಾಗೂ ನಟನೆಗಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದ್ರೆ ಧಾರವಾಡ ಟಾಲ್ಕಿಸ್ ಇದೀಗ ಹುಬ್ಬಳ್ಳಿ, ಧಾರವಾಡ ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ನಟನೆ, ಹಾಡುಗಾರಿಕೆ, ಟೆಕ್ನಿಷಿಯನ್ ಸೇರಿದಂತೆ ವಿವಿಧ ವಿಭಾಗಗಲ್ಲಿ ಅವಕಾಶ ನೀಡಲು ಮುಂದಾಗಿದೆ. ಗುರುವಾರ ನಡೆದ ಆಡಿಷನ್ಗೆ ಉತ್ತಮ ಬೆಂಬಲ ಸಿಕ್ಕಂತಗಿದೆ.ಒಟ್ಟಿನಲ್ಲಿ ಧಾರವಾಡದಲ್ಲೇ ಕಲಾವಿದರಿಗಾಗಿ ಈ ವೇದಿಕೆ ಸೃಷ್ಟಿಯಾಗಿದ್ದಕ್ಕೆ ಉತ್ತರ ಕರ್ನಾಟಕ ಕಲಾವಿದರಿಗೆ ಒಳ್ಳೆಯ ಅವಕಾಶ ಸಿಕ್ಕಂತಗಿದೆ. ಇನ್ನು ಅಡಿಸನ್ ಗೆ ಬಂದ್ ಕಲಾವಿದರು ಸಂತಸವಾಗಿದ್ದಾರೆ..