ಆನ್ ಲೈನ್ ದೋಖಾ... ಮೈಸೂರು ಅರಸರ ಸಂಬಂಧಿ ಎಂದು ಆನ್ ಲೈನ್ ನಲ್ಲಿ ಯುವತಿಯರಿಗೆ ಲಕ್ಷ ,ಲಕ್ಷ ದೋಖಾ..

ಬೆಂಗಳೂರು: .ನಿಮ್ಮ ಮನೆಗಳಲ್ಲಿ ವಯಸ್ಸು ಬಂದಿರುವ ಮಗಳ ಇದ್ದಾಲ್ಲ ಮದುವೆ ಮಾಡ್ಬೇಕು ಅಂದ್ಕೊಂಡಿದೀರಾ ಆನ್ ಲೈನ್ ಗಳಲ್ಲಿ ಪ್ರೊಫೈಲ್ ಅಪ್ ಲೋಡ್ ಮಾಡಿದೀರಾ, ಆಗದ್ರೆ ಹುಷಾರಾಗಿರಿ, ರಾಜಮನೆತನದ ಯುವಕ ನಾನು ರಾಜ ಕುಟುಂಬದ ಸಂಬಂಧಿ , ರಾಜಕುಲದವನು ಎಂದು ನಿಮಗೆ ಪ್ರೋಪೆಲ್ ಅಪ್ರೂವಲ್ ಬಂದ್ರೂ ಬರ್ಬೋದು, ಯಾಕಪ್ಪ ಹೀಗೆ ಹೇಳ್ತಿದೀರಾ ಅಂತೀರಾ ಈ ಸ್ಟೋರಿ ....
ಈ ದೃಶ್ಯಗಳಲ್ಲಿ ನೋಡ್ತಿರೋ ವ್ಯಕ್ತಿಯೇ ಮೈಸೂರು ರಾಜ ಕುಟುಂಬದ ಸಂಬಂಧಿ ಸಿದ್ಧಾರ್ಥ್ ಅರಸ್ ಇಷ್ಟು ಪರಿಗಣಿತವಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿದರೆ ಖಂಡಿತಾ ವಿದ್ಯಾವಂತ ಎಂದು ನಂಬ್ಕೊಂಡ್ರೆ ಅವರಿಗಿಂತ ದೊಡ್ಡ ಮುಟ್ಠಾಳರೆಲ್ಲ ಏಳನೇ ಕ್ಲಾಸ್ ಫೇಲಾದ್ರೂ ಸಹ ಈತನ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ನೋಡುದ್ರೆ ಯಾರಾದ್ರೂ ಸಹ ಮರುಳಾಗಿಬಿಡುತ್ತಾರೆ ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಈತ ಮಾಡಿದೆ ಆನ್ ಲೈನ್ ದೋಖಾ , ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದ್ರೆ ಊಟ, ತಿಂಡಿ , ಮೆಡಿಸನ್ , ಬಟ್ಟೆ ಬರೆ ಆಹಾರ ಪದಾರ್ಥಗಳು ಸೇರಿದಂತೆ ಎಲ್ಲವೂ ಸ್ಮಾರ್ಟ್ ಫೋನ್ ನ ಬೆರಳಂಚಿನಲ್ಲೇ ಅದೇ ಮದುವೆ ಆಗೋರಿಗೆ ಸಹ ಕನ್ನಡ ಮ್ಯಾಟ್ರಿಮೋನಿ , ಸಂಗಮ್ ಮ್ಯಾಟ್ರಿಮೋನಿ ಜನಮನ್ನಣೆ ಕಂಡ ಮೊಬೈಲ್ ಅಪ್ಲಿಕೇಷನ್ ಗಳು ಅಭಿವೃದ್ಧಿ ಕಂಡಿವೆ .ಆನ್ ಲೈನ್ ವೈಬ್‌ಸೈಟ್‌ಗಳಲ್ಲಿ ವಿವಾಹವಾಗಲು ಆಸಕ್ತಿ ಇರುವ ಯುವತಿಯರೇ ಇವನ ಟಾರ್ಗೆಟ್ , ನಾನು ಯು.ಎಸ್.ಎ (ಅಮೇರಿಕಾ) ದಲ್ಲಿ ಮೈಕ್ರೋಸಾಪ್ಟ್ ಇಂಜಿನಿಯರ್ ಎಂದು ನಕಲಿ ಫ್ರೋಫೈಲ್ ಸೃಷ್ಟಿಸಿದ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಯುವತಿಯವರೊಂದಿಗೆ ಪರಿಚಯ ಮಾಡಿಕೊಂಡು ಮೈಸೂರು ಅರಸರ ಸಂಬಂಧಿ ಎಂದು ಮೈಸೂರು ಅರಸರ ಭಾವಚಿತ್ರಗಳನ್ನು ಯುವತಿರಿಗೆ ಕಳಸಿ ನನ್ನ ಬಾಲ್ಯ ಇಲ್ಲಿ ಕಲಿತಿದ್ದೇನೆಂದು ಯುವತಿಯರನ್ನು ನಂಬಿಸುತ್ತಿದ್ದ.
ವೈಟ್ ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲೂ ಯುವತಿಯೊಬ್ಬರಿಗೆ ಮದುವೆಯಾಗೋದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು‌ .ಅಕೌಂಟ್ ನಂಬರ್ ಜಾಡು ಹಿಡಿದು ಹೋದ ಪೊಲೀಸರಿಗೆ ಪಿರಿಯಾಪಟ್ಟಣದಲ್ಲಿ ಆರೋಪಿ ಮಾಹಿತಿ ಸಿಕ್ಕಿದು , ಮುತ್ತು ಇವನ ಹೆಸರಾಗಿದ್ದು, ಸಿದ್ದಾರ್ಥ್ ಅಂತ ಬಳಕೆ ಮಾಡಿದ್ದ . ಯುಎಸ್ ಇಂಗ್ಲಿಷ್, ಸ್ಪಾನಿಷ್,ಮಳಯಾಳಂ ,ಕನ್ನಡ ಭಾಷೆಗಳನ್ನು ಸರಾಗವಾಗಿ ಮಾತಾಡುವ ಇವನು ಪಿರಿಯಾಪಟ್ಟದಕ್ಕೆ ಬರುವ ಟೂರಿಸ್ಟ್ ಗಳ ಬಳಿ ಏಲ್ಕಾ ಭಾಷೆಗಳನ್ನು ಕಲಿತಿರುತ್ತಾನೆ . ಇಂಟರ್ ನ್ಯಾಷನಲ್ ಕಾಲ್ ಮೂಲಕ ಯುವತಿಯರಿಗೆ ಪರಿಚಯ ಸಾಕುತ್ತಿದ್ದ. ಹಾಗೂ ಮೂವರು ಹೆಣ್ಮಕ್ಕಳ ಬಳಿ ವೈಯಕ್ತಿಕ ಸಹಾಯ ಬೇಕೆಂದು ಹಣ ಅಕೌಂಟ್ ಗೆ ಹಣವನ್ನು ಹಾಕಿಸಿಕೊಳ್ತಿದ್ದ..
ಆರೋಪಿ ಮೂರು ಪ್ರಕರಣಗಳಲ್ಲಿ 40 ಲಕ್ಷ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು . ಯುವತಿಯರಿಂದ ಪಡೆದ ಹಣದಿಂದ ಗ್ಯಾಂಬ್ಲಿಂಗ್ ಮಾಡ್ತಿದ್ದ
ಐಷಾರಾಮಿ‌ಜೀವನ‌ ಮಾಡುತ್ತಿದ್ದಾನೆ.. ಈತ ಯೂಟ್ಯೂಬ್ ನಲ್ಲಿ ಕೆಲ ವಿಡಿಯೋಸ್ ನೋಡಿ ಪ್ರೇರೇಪಿತನಾಗಿ ವಂಚನೆ ಮಾಡಲು ಮುಂದಾದೆ ಅಂತ ಪೊಲೀಸರ ತನಿಖೆಯಲ್ಲಿ ಹೊರಬಂದಿದ್ದು 2ವರ್ಷದಿಂದ ಈ ಕೆಲಸ ಮಾಡಿದ್ದಾಗಿ ಮಾಹಿತಿ ಸಿಕ್ಕಿದೆ. ಈತನಿಗೆ ಕೃತ್ಯಕ್ಕೆ ಸಹಾಯ ಮಾಡಿದವರ ಹುಡುಕಾಟ ನಡೆಸಲಾಗ್ತಿದೆ‌ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ....