ಧರ್ಮಸ್ಥಳಕ್ಕೆ ಬಂದಿದ್ದ ಜೋಡಿಯನ್ನು ಅನ್ಯಕೋಮಿನವರೆಂಬ ಕಾರಣಕ್ಕೆ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಧರ್ಮಸ್ಥಳಕ್ಕೆ ಬಂದಿದ್ದ ಜೋಡಿಯನ್ನು ಅನ್ಯಕೋಮಿನವರೆಂಬ ಕಾರಣಕ್ಕೆ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮಂಗಳೂರು: ಧರ್ಮಸ್ಥಳಕ್ಕೆ ಬಂದಿದ್ದ ಜೋಡಿಯನ್ನು ಅನ್ಯ ಕೋಮಿನವರೆಂಬ ಕಾರಣಕ್ಕೆ ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕನ್ಯಾಡಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ದಾದಾಪೀರ್‌ ಎಂಬ ಮುಸ್ಲಿಂ ಯುವಕ ಮತ್ತು ವಿವಾಹಿತ ಹಿಂದು ಮಹಿಳೆ ಜತೆಯಾಗಿ ಧರ್ಮಸ್ಥಳಕ್ಕೆ ಬಂದಿದ್ದರು.

ಅವರು ಲಾಡ್ಜ್‌ ನಲ್ಲಿ ರೂಮ್‌ ಮಾಡಲು ಬಂದಿದ್ದಾರೆ. ಈ ವೇಳೆ ಅವರ ಮೇಲೆ ಸಂಶಯದಿಂದ ಸ್ಥಳೀಯರು ಹಿಂದು ಕಾರ್ಯಕರ್ತರು ಅವರನ್ನು ವಿಚಾರಿಸಿದ್ರು.ವಿಚಾರಣೆಯ ವೇಳೆ ಯುವಕ ಮುಸ್ಲಿಂ ,ಮಹಿಳೆ ಹಿಂದೂ ಎನ್ನುವುದು ಗೊತ್ತಾಯಿತು. ಕೂಡಲೇ ಅವರು ಅವರಿಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ರು. ಈ ಸಂಬಂಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.