ಪತಿ ಸಾವು ಹಿನ್ನೆಲೆ ತಾಯಿ, ಇಬ್ಬರು ಮಕ್ಕಳು ನೇಣಿಗೆ ಶರಣು
ಒಂದು ವರ್ಷದ ಹಿಂದೆ ಕೊರೋನ ದಿಂದ ಪತಿ ಸಾವು ಹಿನ್ನೆಲೆ ಜಿಗುಪ್ಸೆಗೊಂಡು ತಾಯಿ ಇಬ್ಬರು ಮಕ್ಕಳು ನೇಣಿಗೆ ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ. ತಾಯಿ ವಸಂತ, ಮಕ್ಕಳಾದ ಯಶವಂತ್, ನಿಶ್ಚಿತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ನಾಲ್ಕನೇ ಪ್ರಯತ್ನದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನೆಲಮಂಗಲ ಡಿವೈಎಸ್ ಪಿ ಜಗದೀಶ್ ಭೇಟಿ ಪರಿಶೀಲನೆ ನಡೆಸುತ್ತಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಮಾದನಾಯಕನಹಳ್ಳಿ ಪೆÇಲೀಸರಿಂದ ಹೆಚ್ಚಿನ ತನಿಖೆ ಮುಂದುವರೆದಿದೆ.