ಕೆ.ಎಲ್. ರಾಹುಲ್ಗೆ ಮಾವ ಸುನೀಲ್ ಶೆಟ್ಟಿ ಕೊಟ್ಟ ಗಿಫ್ಟ್ ಏನು ಗೊತ್ತಾ

ಮುಂಬೈ: ಇತ್ತೀಚೆಗಷ್ಟೇ ಖ್ಯಾತ ಕ್ರಿಕೆಟಿಗ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆ ಖಂಡಾಲಾದಲ್ಲಿ ನಡೆದಿದೆ. ಈ ಮದುವೆಯಲ್ಲಿ ಬಾಲಿವುಡ್ನ ಸಾಕಷ್ಟು ಸೆಲೆಬ್ರಿಟಿಗಳ ಜತೆಗೆ, ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಹಾಜರಿದ್ದು, ರಾಹುಲ್ ಮತ್ತು ಅಥಿಯಾಗೆ ಶುಭ ಕೋರಿದ್ದಾರೆ.
ಇದೀಗ ಈ ದಂಪತಿಗೆ ಯಾರ್ಯಾರು, ಏನೇನು ಗಿಫ್ಟ್ಗಳನ್ನು ಕೊಟ್ಟಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆದಿದೆ. ಮೂಲಗಳ ಪ್ರಕಾರ, ಈ ದಂಪತಿಗೆ ದುಬಾರಿ ಗಿಫ್ಟ್ಗಳ ಸುರಿಮಳೆಯೇ ಆಗಿದೆಯಂತೆ. ಕ್ರಿಕೇಟ್, ಸಿನಿಮಾ ಎರಡು ಕ್ಷೇತ್ರಗಳಿಂದ ಸ್ಟಾರ್ ಜೋಡಿಗೆ ಐಷಾರಾಮಿ ಉಡುಗೊರೆಗಳು ಸಿಕ್ಕಿವೆಯಂತೆ.
ಅದರಲ್ಲೂ ರಾಹುಲ್ ಮಾವ ಮತ್ತು ಅಥಿಯಾ ಅವರ ತಂದೆ ಸುನೀಲ್ ಶೆಟ್ಟಿ 50 ಕೋಟಿ ಮೌಲ್ಯದ ದುಬಾರಿ ಫ್ಲಾಟ್ ನೀಡಿ, ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದಾರಂತೆ.
ಇನ್ನು, ಬಾಲಿವುಡ್ ನಟ ಸಲ್ಮಾನ್ ಖಾನ್, ಆಥಿಯಾಗೆ 1.6 ಕೋಟಿ ರೂ. ಮೌಲ್ಯದ AUDI ಕಾರ್ ಗಿಫ್ಟ್ ಕೊಟ್ಟಿದ್ದಾರಂತೆ. ಜಾಕಿ ಶ್ರಾಫ್ ಮತ್ತು ಅರ್ಜುನ್ ಕಪೂರ್ ದುಬಾರಿ ಮೌಲ್ಯದ ವಾಚ್ ಮತ್ತು ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದಾರಂತೆ. ಇನ್ನು, ರಾಹುಲ್ಗೆ ಧೋನಿ ಕಡೆಯಿಂದ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಬೈಕ್ ಗಿಫ್ಟ್ಟ್ ಸಿಕ್ಕರೆ, ವಿರಾಟ್ ಕೋಹ್ಲಿ ದಂಪತಿಯು 2.70 ಕೋಟಿ ರೂ. ಮೊತ್ತದ ಬಿ.ಎಂ.ಡಬ್ಲ್ಯು ಕಾರ್ ಗಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.