ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಮುನಿಯಪ್ಪ: ಕುತೂಹಲ ಕೆರಳಿಸಿದ ನಾಯಕರ ನಡೆ

ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಮುನಿಯಪ್ಪ: ಕುತೂಹಲ ಕೆರಳಿಸಿದ ನಾಯಕರ ನಡೆ

2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಇಂದು(ನ. 21) ಕೊನೆ ದಿನವಾಗಿದ್ದು, ಘಟಾನುಘಟಿ ನಾಯಕರುಗಳು ಟಿಕೆಟ್​ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್​. ಮುನಿಯಪ್ಪ ಕೂಡ ಟಿಕೆಟ್​ಗಾಗಿ ಅರ್ಜಿ ಹಾಕಿದ್ದಾರೆ. ಇದೀಗ ಮುನಿಯಪ್ಪ ಸಹ ಅದೇ ಮಾದರಿ ಅನುಸರಿಸಿದ್ದು, ಇಬ್ಬರು ನಾಯಕರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.