ಚಿಕ್ಕಮಗಳೂರು :ಅಕ್ರಮ ಮರ ಕಡಿತಲೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಕಳಸ ವಲಯ ಸಂರಕ್ಷಣಾಧಿಕಾರಿ ಜೆ. ವಿಜಯಕುಮಾರ್ ಅಮಾನತುಗೊಂಡಿದ್ದಾರೆ,
ಬಾಳೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಹಲಕಡಕ ಕಾಫಿ ತೋಟದ ಮಾಫಿ ಪ್ರದೇಶದ ಗಡಿ ಗುರುತಿಸುವಲ್ಲಿವಿಫಲವಾಗಿರುವ ಗಂಭೀರ ಆರೋಪ ಇವರ ಮೇಲಿತ್ತು .
ಈ ಪ್ರದೇಶದಿಂದ ಲಕ್ಷಾಂತರ ರೂ. ಬೆಲೆಬಾಳುವ 96 ಮರಗಳನ್ನು ಅಕ್ರಮ ಕಡಿತಲೆ ಮಾಡಲಾಗಿತ್ತು .
ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದ ನಂತರ ಅಕ್ರಮವಾಗಿ ಕಡಿದ ಮರಗಳನ್ನು ಇಲಾಖೆ ವಶಕ್ಕೆ ತೆಗೆದುಕೊಂಡಿದೆ .
ಈ ಹಗರಣದಲ್ಲಿ ವಲಯಾರಣ್ಯಾಧಿಕಾರಿ ಜೆ. ವಿಜಯಕುಮಾರ್ ಶಾಮೀಲಾಗಿರುವುದಾಗಿ ಸ್ಥಳೀಯರು ಆರೋಪಿಸಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರು .
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದರು. ವರದಿ ಆಧರಿಸಿ ಅರಣ್ಯ ಪಡೆಯ ಮುಖ್ಯಸ್ಥರೂ ಆದ ಪ್ರಧಾನ ಅರಣ್ಯ ಸಂರಕ್ಷ ಣಾಧಿಕಾರಿಗಳು ಅಮಾನತು ಆದೇಶ ಹೊರಡಿಸಿ ಇಲಾಖೆ ತನಿಖೆಯನ್ನು ಕಾಯ್ದಿರಿಸಿದ್ದಾರೆ .
ಆರೋಪದ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಒತ್ತಾಯಿಸಿ ಅರಣ್ಯ ಸಚಿವರಿಗೆ ಪತ್ರವನ್ನು ಬರೆದಿದ್ದರು .